ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಫ್‌ಎಸ್‌ಸಿ ನಂಬರ್‌ ಪಡೆದು ₹2.84 ವಂಚನೆ

Last Updated 15 ಜನವರಿ 2022, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಮರಳಿಸಿ ಬಟ್ಟೆ ಹಣ ವಾಪಾಸ್ ಪಡೆಯಲೆಂದು ಇಲ್ಲಿನ ರವಿನಗರದ ಬಿ.ಎಂ. ಬನ್ನೆ ಅವರು ನೀಡಿದ್ದ ಬ್ಯಾಂಕ್‌ ಖಾತೆ ವಿವರ ಹಾಗೂ ಐಎಫ್‌ಎಸ್‌ಸಿ ನಂಬರ್‌ ಪಡೆದ ವಂಚಕರು, ಅವರ ಖಾತೆಯಿಂದ ₹2.84 ಲಕ್ಷ ವರ್ಗಾಯಿಸಿಕೊಂಡಿದ್ದಾರೆ.

ಬನ್ನೆ ಅವರು ಸ್ನ್ಯಾಪ್‌ ಡೀಲ್‌ ಆನ್‌ಲೈನ್‌ ಮಾರ್ಕೆಟ್‌ನಲ್ಲಿ ₹999 ನೀಡಿ ಬರ್ಮುಡಾ ಖರೀದಿಸಿದ್ದರು. ಅದು ಇಷ್ಟವಾಗಿಲ್ಲವೆಂದು ವಾಪಸ್ ಕಳುಹಿಸಿದ್ದರು. ಹಣ ಮರಳಿ ಬರದಿದ್ದಾಗ, ಆನ್‌ಲೈನ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಹಣ ಮರಳಿಸುವುದಾಗ ನಂಬಿಸಿದ ವಂಚಕ, ಇವರಿಂದ ಬ್ಯಾಂಕ್‌ ಮಾಹಿತಿ ಪಡೆದು, ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಮತ್ತೊಂದು ಬ್ಯಾಂಕ್‌ ಖಾತೆಯಿಂದಲೂ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹1.20 ಲಕ್ಷ ವಂಚನೆ: ಹುಬ್ಬಳ್ಳಿಯ ರೆವೆನ್ಯೂ ನಗರದ ಉದಯ ಡಿ. ಅವರು ಆನ್‌ಲೈನ್‌ನಲ್ಲಿ ನೀಡಿದ್ದ ಮನೆ ಬಾಡಿಗೆ ಜಾಹೀರಾತು ನೋಡಿ, ಅದನ್ನು ಖರೀದಿಸುವುದಾಗಿ ಕರೆ ಮಾಡಿದ ವಂಚಕ, ಮುಂಗಡ ಹಣ ಪಾವತಿಸುತ್ತೇನೆ ಎಂದು ಬ್ಯಾಂಕ್‌ ಮಾಹಿತಿ ಪಡೆದು ₹1.20 ಲಕ್ಷ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಉದಯ ಅವರು ಮ್ಯಾಜಿಕ್‌ ಬ್ರಿಕ್ಸ್‌ ಡಾಟ್‌ ಕಾಮ್‌ ನಲ್ಲಿ ಮನೆ ಬಾಡಿಗೆ ಜಾಹೀರಾತು ನೀಡಿದ್ದರು. ಮನೆ ಖರೀದಿಸಲು ಮುಂಗಡವಾಗಿ ಗೂಗಲ್‌ ಪೇ ಮೂಲಕ ಹಣ ಪಾವತಿಸುತ್ತೇನೆ ಎಂದು, ಅವರ ಗೂಗಲ್‌ ಪೇ ನಲ್ಲಿ ತನ್ನ ಬ್ಯಾಂಕ್‌ ಖಾತೆ ಹಾಗೂ ಐಎಫ್‌ಎಸ್‌ಸಿ ನಂಬರ್‌ ದಾಖಲಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಕಳವು; ನಾಲ್ವರ ಬಂಧನ: ಕಳವು ಮಾಡಿದ ಕಾರುಗಳನ್ನು ಹುಬ್ಬಳ್ಳಿಯಲ್ಲಿ ಮಾರಾಟ ಹಾಗೂ ಒತ್ತೆ ಇಟ್ಟು ಹಣ ಪಡೆಯುತ್ತಿದ್ದ ನಾಲ್ವರು ಅಂತರರಾಜ್ಯ ಕಳವು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, ಎರಡು ಇನ್ನೊವಾ ಕಾರು ಹಾಗೂ ₹2.27 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಮೂಲ್ಕಿಯ ಮೂವರು ಹಾಗೂ ಹುಬ್ಬಳ್ಳಿಯ ಮಧ್ಯವರ್ತಿ ರಾಜೇಶ ಬಂಧಿತರು.

ಮಂಗಳೂರಿನಲ್ಲಿ ಕಳವು ಮಾಡಿದ ಎರಡು ಇನ್ನೊವಾ ಕಾರನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಿದ್ದರು. ಹಣಕಾಸು ಸಂಸ್ಥೆಗಳು ಜಫ್ತಿ ಮಾಡಿರುವ ವಾಹನಗಳನ್ನು ಕಳವು ಮಾಡಿ, ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಅಥವಾ ಒತ್ತೆ ಇಟ್ಟು ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ವಶ: ಮಂಟೂರ ರಸ್ತೆಯ ಅರಳಿಕಟ್ಟಿ ಕಾಲೊನಿ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ಅಫ್ಜಲ್‌ ಬೇಪಾರಿಯನ್ನ ಶಹರ ಠಾಣೆ ಪೊಲೀಸರು ಬಧಿಸಿ, ₹20 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT