ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ ಬಳಿ ರಸ್ತೆ ಅಪಘಾತ: ನಾಲ್ವರು ಸಾವು

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಅಲ್ಲೇ ನಿಂತವರ ಮೇಲೆ ಲಾರಿ ಹರಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
Published 6 ಜನವರಿ 2024, 16:17 IST
Last Updated 6 ಜನವರಿ 2024, 16:17 IST
ಅಕ್ಷರ ಗಾತ್ರ

ಕುಂದಗೋಳ (ಧಾರವಾಡ ಜಿಲ್ಲೆ): ತಾಲ್ಲೂಕಿನ ಬೆಳ್ಳಿಗಟ್ಟಿ ಗ್ರಾಮದ ಸೇತುವೆ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನಲ್ಲಿ ಅಪಘಾತಕ್ಕೀಡಾದ ಎರಡು ಕಾರುಗಳಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಅಲ್ಲೇ ನಿಂತವರ ಮೇಲೆ ಲಾರಿ ಹರಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

‘ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೆತ್ತಗೌಡನಹಳ್ಳಿಯ ಮಣಿಕಂಠ (26), ಪವನ (23), ಚಂದನಗೌಡ (31), ಬೆಂಗಳೂರಿನ ರಾಮಮೂರ್ತಿ ನಗರದ ಹರೀಶ್‍ಕುಮಾರ್ (40) ಮೃತರು. ಹೆತ್ತಗೌಡನಹಳ್ಳಿಯ ಎಚ್‌.ಬಿ.ಕಿಶನ್‌ಕುಮಾರ್ (23), ನಂದನಕುಮಾರ್ (27), ಬೆಂಗಳೂರಿನ ವಿದ್ಯಾರಣ್ಯಪುರದ ಪ್ರಭು (34), ಬಾಣಸವಾಡಿಯ ಹರಿಕುಮಾರ್ (28), ಶ್ರೀರಾಂಪುರದ ರವಿಶೆಟ್ಟಿ ಗಾಯಗೊಂಡವರು’ ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ. 

‘ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೆತ್ತಗೌಡನ ಹಳ್ಳಿಯಿಂದ ಗೋವಾಕ್ಕೆ ಸಾಗುತ್ತಿದ್ದ ಕಾರು ಬೆಳ್ಳಿಗಟ್ಟಿ ಬಳಿ ನಿಂತಿದ್ದ ವೇಳೆ ಬೆಂಗಳೂರಿನಿಂದ ಶಿರಡಿಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಕಾರಿನಲ್ಲಿದ್ದವರು ಅಲ್ಲೇ ನಿಂತಿದ್ದ ವೇಳೆ ಲಾರಿಯೊಂದು ಅವರ ಮೇಲೆ ಹರಿದಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು, ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT