ಗುರುವಾರ , ಜುಲೈ 29, 2021
20 °C
ಸಚಿವರಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹ

ಶಿಕ್ಷಕರಿಗೆ ‌ಮನೆಯಿಂದಲೇ ತಯಾರಿಗೆ ಅವಕಾಶ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಕೈಗೊಳ್ಳುವ ತನಕ ಶಿಕ್ಷಕರಿಗೆ ಮನೆಯಿಂದಲೇ ಪೂರ್ವತಯಾರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಶಾಲೆ ಪ್ರಾರಂಭದ ದಿನದಿಂದಲೇ ಮಕ್ಕಳು ಹಾಗೂ ಶಿಕ್ಷಕರು ಏಕಕಾಲದಲ್ಲಿ ಶಾಲೆಗೆ ಹಾಜರಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಶಿಕ್ಷಣ ಸಚಿವ ಸುರೇಶ ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಜುಲೈನಲ್ಲಿ ಶಾಲಾ, ಕಾಲೇಜುಗಳ ಆರಂಭಕ್ಕೆ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿರುವ ಕಾರಣ ರಾಜ್ಯ ಸರ್ಕಾರ ಜೂನ್‌ 5ರಿಂದ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ಶಾಲೆಗೆ ಬರಬೇಕು. ಶಾಲಾ ಪ್ರಾರಂಭಕ್ಕೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಆದರೆ, ಶಿಕ್ಷಕರು ಬಹಳಷ್ಟು ಅಪಾಯದಲ್ಲಿ ಆತಂಕದಿಂದ ಶಾಲೆಗೆ ಹೋಗಬೇಕಾಗಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ತಮ್ಮ ಊರುಗಳಲ್ಲಿಯೇ ಉಳಿದಿರುವ ಶಿಕ್ಷಕಕರಿಗೆ ಬೇರೆ ಜಿಲ್ಲೆಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಹೆಚ್ಚು ಕೋವಿಡ್‌ 19 ಪ್ರಕರಣಗಳು ಇರುವ ಸ್ಥಳದಿಂದ ಕೆಲಸ ಮಾಡುವ ಹಳ್ಳಿಗಳ ಶಾಲೆಗಳಿಗೆ ಹೋದರೆ ಅಲ್ಲಿಯೂ ಸೋಂಕು ತಗುಲುವ ಅಪಾಯವಿದೆ. ಮಕ್ಕಳ ದಾಖಲಾತಿಗಾಗಿ ಶಿಕ್ಷಕರು ಮನೆಮನೆಗೆ ತೆರಳಿದಾಗ ಸೋಂಕು ಹರಡಿದರೂ ಅಚ್ಚರಿಯಿಲ್ಲ. ಆದ್ದರಿಂದ ಸರ್ಕಾರ ಈ ಕುರಿತು ತನ್ನ ನಿರ್ಧಾರ ಪುನರ್‌ ಪರಿಶೀಲಿಸಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಎಂ.ಸಜ್ಜನ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಉಪ್ಪಿನ ಗೌರವ, ಮಹೇಶ ಜೋಶಿ, ಎಲ್.ಐ.  ಲಕ್ಕಮ್ಮನವರ, ಶರಣಪ್ಪಗೌಡ್ರ, ಎಸ್.ಎಫ್.ಪಾಟೀಲ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.