ಮಂಗಳವಾರ, ಜನವರಿ 18, 2022
27 °C

ಧಾರವಾಡ: ಅನಂತ್‌ ಹೆಗಲಿಗೆ ಎಎಪಿ ಜಿಲ್ಲಾ ಘಟಕದ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಆಮ್‌ ಆದ್ಮಿ ಪಕ್ಷದ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾಗಿದ್ದ ಅನಂತಕುಮಾರ ಬುಗಡಿ ಅವರು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಶಾಮ ನರಗುಂದ (ಜಿಲ್ಲಾ ಘಟಕದ ಕಾರ್ಯದರ್ಶಿ), ಸಂತೋಷ ಮಾನೆ (ಸಹ ಕಾರ್ಯದರ್ಶಿ), ಶಶಿಕುಮಾರ ಸುಳ್ಳದ (ಉಪಾಧ್ಯಕ್ಷ ಹಾಗೂ ಹುಬ್ಬಳ್ಳಿ ಶಹರ ಸಂಚಾಲಕ), ಪ್ರವೀಣಕುಮಾರ ನಡಕಟ್ಟಿನ (ಉಪಾಧ್ಯಕ್ಷರು ಮತ್ತು ಧಾರವಾಡ ಶಹರ ಸಂಚಾಲಕ) ಆಯ್ಕೆ ಮಾಡಲಾಗಿದೆ.

ಮೊದಲು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸಂತೋಷ ನರಗುಂದ ನಾಲ್ಕು ವರ್ಷಗಳ ಕಾಲ ಈ ಜವಾಬ್ದಾರಿ ನಿಭಾಯಿಸಿದ್ದರು. ಹೊಸ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದವರ ಮಾಹಿತಿ ಪರಿಶೀಲಿಸಿ ಪಕ್ಷದ ಜಿಲ್ಲೆಯ ಮುಖಂಡರು ಹಾಗೂ ರಾಜ್ಯ ನಾಯಕರ ಜೊತೆ ಚರ್ಚಿಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂತೋಷ ತಿಳಿಸಿದ್ದಾರೆ.

ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಸಂತೋಷ ‘ಸಂಘಟನೆಯ ಎಲ್ಲ ಕಾರ್ಯಕರ್ತರನ್ನು, ಮುಖಂಡರನ್ನು ಒಗ್ಗೂಡಿಸಿ ಜನರ ಧ್ವನಿಯಾಗಿ ಮುಂದೆ ಸಾಗುವುದೇ ನಾಯಕತ್ವದ ಪ್ರಥಮ ಕರ್ತವ್ಯ. ಯಾವಾಗಲೂ ತಂಡವಾಗಿ ಕೆಲಸ ಮಾಡಿದರೆ ಸದೃಢ ಸಂಘಟನೆ ಕಟ್ಟಲು ಸಾಧ್ಯ’ ಎಂದರು.

ಪಕ್ಷದ ಮುಖಂಡರಾದ ಬಸವರಾಜ ಮುಡಿಗೌಡರ, ಮಲ್ಲಪ್ಪ ತಡಸದ, ರೂಪಾಲಿ ನರಗುಂದ, ಕಸ್ತೂರಿ ಮುರಗೋಡ, ಸದಾನಂದ ಹೊಳೆಣ್ಣವರ, ದೀಪಿಕಾ ಮುತ್ತ, ಆರತಿ ನರಗುಂದ, ಹಸನಸಾಬ ಇನಾಮದಾರ, ಶಿವಕುಮಾರ ಬಾಗಲಕೋಟ, ಮಹಬೂಬ ಹರವಿ, ವಿಜಯ ಸಾಯಿ, ಡೇನಿಯಲ್ ಐಕೋಸ, ನಾಮದೇವ ಬೀಳಗಿ, ಕಲೀಮ ಲಕ್ಷ್ಮೇಶ್ವರ, ಶಿವಕಿರಣ ಅಗಡಿ, ರಮೇಶ ಜಮಾದಾರ, ಸವಿತಾ ಸಾವಂತವಾಡಿ, ಭೀಮಸಿಂಗ ಜಾಧವ, ವಿಕಾಸ ಸೊಪ್ಪಿನ, ಬೆಂಜಮಿನ ಸೋಂಘರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು