ಬುಧವಾರ, ಜನವರಿ 29, 2020
27 °C

ಎಪಿಎಲ್‌ ಕ್ರಿಕೆಟ್‌ ಟೂರ್ನಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಸ್ತ್ರ ಪ್ರೀಮಿಯರ್‌ ಲೀಗ್‌ (ಎಪಿಎಲ್‌) ಹೊನಲು ಬೆಳಕಿನ ಎರಡನೇ ಆವೃತ್ತಿಯ ಕ್ರಿಕೆಟ್‌ ಟೂರ್ನಿ ಡಿ. 21 ಮತ್ತು 22ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಗೂಗ್ಲಿ ಪೊಳಲಿ ಟೈಗರ್ಸ್‌, ಅಭಯ ಕ್ರಿಕೆಟರ್ಸ್‌, ಟೀಮ್‌ ಎಂಪೈರ್‌, ಮೈಟ್‌ ರೈಡರ್‌, ಉಡುಪಿ ಹಾಸ್ಪೆಟಲಿಟಿ ಸರ್ವಿಸಸ್‌, ಧಾರವಾಡದ ಎಸ್‌ಕೆಪಿ ಟೈಟನ್ಸ್‌ ಮತ್ತು ಸುಗ್ಗಿ ಸೂಪರ್‌ಸ್ಟಾರ್ಸ್‌ ತಂಡಗಳು ಭಾಗವಹಿಸಲಿವೆ. ಪ್ರತಿ ಪಂದ್ಯ ತಲಾ ಹತ್ತು ಓವರ್‌ಗಳದ್ದಾಗಿದೆ.

ಚಾಂಪಿಯನ್‌ ತಂಡಕ್ಕೆ ₹2.5 ಲಕ್ಷ ಮತ್ತು ರನ್ನರ್ಸ್‌ ಅಪ್‌ ₹ 1.25 ಲಕ್ಷ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ. ಮೊದಲ ದಿನ ಎಂಟು ಮತ್ತು ಎರಡನೇ ದಿನ ಏಳು ಪಂದ್ಯಗಳು ಜರುಗಲಿವೆ. ಪಂದ್ಯಗಳು ಬೆಳಿಗ್ಗೆ 8.30ರಿಂದ ಆರಂಭವಾಗಲಿದ್ದು, ಉದ್ಘಾಟನೆ 10 ಗಂಟೆಗೆ ಜರುಗಲಿದೆ.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟ್ಟಿಯಾರ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ ಹೋಟೆಲ್‌ ಸಂಘದ ಅಧ್ಯಕ್ಷ ಸುಕುಮಾರ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ನಡೆಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ.

ಸೋಮಶೇಖರ ಶಿರಗುಪ್ಪಿ (ಕ್ರಿಕೆಟ್‌), ಸುಧೀರ ಶೆಟ್ಟಿ (ವಾಲಿಬಾಲ್‌), ಸಹನಾ ಕುಲಕರ್ಣಿ (ಟೇಬಲ್‌ ಟೆನಿಸ್‌), ದಿಥಿಶಾ ಶೆಟ್ಟಿ (ಟೇಕ್ವಾಂಡೊ), ಪ್ರಿಯಾಂಕಾ ಶೆಟ್ಟಿ (ಸಾಂಸ್ಕೃತಿಕ), ಅಲ್ಫಿಯಾ ಬಸರಿ ಮತ್ತು ಗ್ಲೋರಿಯಾ ಅಠವಾಲೆ (ಬ್ಯಾಡ್ಮಿಂಟನ್) ಅವರಿಗೆ ಸಾಧಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಅಸ್ತ್ರ ಇವೆಂಟ್ಸ್‌ನ  ಸುಧೀರ ಶೆಟ್ಟಿ, ಮತ್ತು ವಿರೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು