ಮಂಗಳವಾರ, ಮೇ 24, 2022
30 °C

ಕ್ರಮ ಕೈಗೊಳ್ಳಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಗೋಳ: ನರೇಗಾ ಯೋಜನೆಯಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೂ, ಸರಿಯಾದ ಸಮಯಕ್ಕೆ ಕೆಲಸ ಕೊಡದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾರ್ಮಿಕ ಸಂಘದ ಸದಸ್ಯೆ ನಿಂಗಮ್ಮ ಸವಣೂರ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಅಜೇಯ.ಎನ್ ಅವರಿಗೆ ದೂರು ನೀಡಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿಕಾರ್ಮಿಕರೂಂದಿಗೆ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಬಂದ ಅವರು ‘ನಿರುದ್ಯೋಗ ಭತ್ಯೆ ನೀಡಲು ಆದೇಶವಿದ್ದರೂ ಕಳಸ, ಸಂಶಿ, ನೆರ್ತಿ, ಕಮಡೊಳ್ಳಿ ಗುಡಗೇರಿ, ತರ್ಲಘಟ್ಟ, ಹಿರೇಗುಂಜಳ, ಪಶುಪತಿಹಾಳ, ರೊಟ್ಟಿಗವಾಡ, ಹಿರೇಬೂದಿಹಾಳ ಹಾಗೂ ದ್ಯಾವನೂರು ಪಂಚಾಯ್ತಿ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತಾಲ್ಲೂಕು ಅಧಿಕಾರಿಗಳು ಗಮನಹರಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಏ. 25ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು