ಶನಿವಾರ, ಮೇ 8, 2021
26 °C

ಕಲ್ಲಂಗಡಿಯಲ್ಲಿ ಅರಳಿದ ‘ಈ ಸಲ ಕಪ್‌ ನಮ್ದೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಅಲಿ ಎಂ. ಕರಜಗಿ ಅವರು ಕಲ್ಲಂಗಡಿಯಲ್ಲಿ ‘ಈ ಸಲ ಕಪ್‌ ನಮ್ದೇ’ ಹಾಗೂ ಆರ್‌ಸಿಬಿ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಚಿತ್ರವನ್ನು ಅರಳಿಸಿದ್ದಾರೆ.

20 ವರ್ಷಗಳಿಂದ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮೊಹಮ್ಮದ್‌, ಆರ್‌ಸಿಬಿ ತಂಡದ ಪಕ್ಕಾ ಅಭಿಮಾನಿ. ಶುಕ್ರವಾರ ಐಪಿಎಲ್‌ ಟೂರ್ನಿ ಆರಂಭವಾದ ಹಿನ್ನೆಲೆಯಲ್ಲಿ ಕಲ್ಲಂಗಡಿಯಲ್ಲಿ ಶುಭ ಹಾರೈಸಿದ್ದಾರೆ.

‘‍ಪ್ರತಿ ಸಲ ಐಪಿಎಲ್‌ ಟೂರ್ನಿ ಬಂದಾಗಲೆಲ್ಲ ನನ್ನ ನೆಚ್ಚಿನ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ಪ್ರತಿ ವರ್ಷವೂ ವಿಭಿನ್ನ ರೀತಿಯಾಗಿ ತಂಡವನ್ನು ಹಾರೈಸುತ್ತೇನೆ. ಈ ಬಾರಿ ಕಲ್ಲಂಗಡಿಯಲ್ಲಿ ಈ ಸಲ ಕಪ್‌ ನಮ್ದೇ ಎಂದು ಬರೆದು ತಂಡಕ್ಕೆ ಶುಭ ಕೋರಿದ್ದೇನೆ. ಕಲಾಕೃತಿ ಕೆತ್ತನೆಗೆ ಮೂರು ತಾಸು ಸಮಯ ಬೇಕಾಯಿತು. ಐಪಿಎಲ್‌ ಟೂರ್ನಿ ಸಮಯದಲ್ಲಿ ಸಂಜೆ 7.30ರ ಒಳಗೆ ವ್ಯಾಪಾರ ಮುಗಿಸಿ ಮನೆಗೆ ಹೋಗಿ ನಿತ್ಯ ಪಂದ್ಯಗಳನ್ನು ನೋಡುತ್ತೇನೆ’ ಎಂದು ಮೊಹಮ್ಮದ್ ತಿಳಿಸಿದರು. ಮೊಹಮ್ಮದ್‌ ಹಿಂದೆ ಕ್ರಿಕೆಟ್‌ ವಿಶ್ವಕಪ್ ಸಮಯದಲ್ಲಿಯೂ ಕಲ್ಲಂಗಡಿಯಲ್ಲಿ ಟ್ರೋಫಿ ಅರಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.