ಹುಬ್ಬಳ್ಳಿ: ಸಪ್ನ ಬುಕ್ಹೌಸ್ ವತಿಯಿಂದ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಕಲಾ ಉತ್ಸವ–2025 ಹಾಗೂ ಹುಬ್ಬಳ್ಳಿ ಕಾವ್ಯೋತ್ಸವ– 2025 ಸ್ಪರ್ಧೆಯ ವಿಜೇತರಿಗೆ ಇಲ್ಲಿನ ಕೋಯಿನ್ ರಸ್ತೆಯ ಮಳಿಗೆಯಲ್ಲಿ ಭಾನುವಾರ ಬಹುಮಾನ ವಿತರಿಸಲಾಯಿತು.

ಹುಬ್ಬಳ್ಳಿ ಕಲಾ ಉತ್ಸವದಲ್ಲಿ 16 ವರ್ಷದೊಳಗಿನವರು ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

16 ವರ್ಷದೊಳಗಿನ ವಿಭಾಗದಲ್ಲಿ ಕಾರ್ತಿಕ ಬೆಳ್ಳೇರಿಮಠ (ಪ್ರಥಮ), ಶಿವಾನಿ ರೇವಣಕರ (ದ್ವಿತೀಯ), ರಾಘವೇಂದ್ರ ಎಸ್.ಯು. (ತೃತೀಯ) ಹಾಗೂ 16 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಮತಾ (ಪ್ರಥಮ), ಮೌನೇಶ ಬಡಿಗೇರ (ದ್ವಿತೀಯ), ಕೀರ್ತನಾ ಏಕಬೋಟೆ (ತೃತೀಯ) ಬಹುಮಾನ ಪಡೆದರು.

ಹುಬ್ಬಳ್ಳಿ ಕಾವ್ಯೋತ್ಸವ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಸುಶೀಲೇಂದ್ರ ಆಚಾರ್ಯ (ಪ್ರಥಮ), ರೇಣುಕಾತಾಯಿ ಎಂ. (ದ್ವಿತೀಯ), ಹಿಂದಿ ವಿಭಾಗದಲ್ಲಿ ಮನೀಶಕುಮಾರ್ (ಪ್ರಥಮ), ಆದರ್ಶಕುಮಾರ ಸಿಂಗ್ (ದ್ವಿತೀಯ), ಇಂಗ್ಲಿಷ್ ವಿಭಾಗದಲ್ಲಿ ರಾಮ ಆನಂದ (ಪ್ರಥಮ), ರುಹಾ ಬದಾಮಿ (ದ್ವಿತೀಯ) ಬಹುಮಾನ ಪಡೆದರು.

ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಟಗೋಡಿ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ, ‘ಕಲೆ ಎಂದರೆ ಸಮಾಜದ ಕನ್ನಡಿ. ಸಾಹಿತ್ಯ, ಲಲಿತ ಕಲೆ, ಕಲೆ, ಬದುಕಿನ ಚೌಕಟ್ಟು ತೋರಿಸುವುದೇ ದೊಡ್ಡ ಕಲೆಯಾಗಿದೆ. ಶ್ರದ್ಧೆ, ಸತತ ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು. ಕಲಾವಿದರಲ್ಲಿ ತಂತ್ರಗಾರಿಕೆ ಮುಖ್ಯ’ ಎಂದರು.

ಕಲಾವಿದ ಎಂ.ಜೆ. ಬಂಗ್ಲೇವಾಲ ಮಾತನಾಡಿ, ‘ಕಲಾವಿದರಿಗೆ ಸ್ವಂತಿಕೆ ಮುಖ್ಯ. ಕಲೆಯನ್ನು ನಕಲು ಮಾಡಬಾರದು. ಇಂತಹ ಸ್ಪರ್ಧೆಗಳ ಮೂಲಕ ಪ್ರತಿಭೆಗಳಿಗೆ ಸಪ್ನಾ ಬುಕ್ಹೌಸ್ ವೇದಿಕೆಯಾಗಿದೆ. 82 ವರ್ಷದ ಕಲಾವಿದರೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿತು’ ಎಂದರು.

ನಿರ್ಣಾಯಕರಾದ ಕವಿತಾ ಹೆಗಡೆ, ಅಭಿಷೇಕ ತಿಪ್ಪಾ, ರಾಜೇಶ ಪಟ್ನಾಯಕ ಮೇಘನಾ ರಘು, ಸವಿತಾ ದೀಕ್ಷಿತ್ ಮಾತನಾಡಿದರು. ಸಪ್ನ ಬುಕ್ಹೌಸ್ ಹುಬ್ಬಳ್ಳಿ ಹುಬ್ಬಳ್ಳಿ ಶಾಖೆಯ ಮುಖ್ಯಸ್ಥ ರಘು ಎಂ.ವಿ., ಸಾಹಿತ್ಯ ಪ್ರಿಯರು ಇದ್ದರು.

ಸಪ್ನಾ ಎಂದರೆ ಪುಸ್ತಕಗಳ ಕನಸು. ಹುಬ್ಬಳ್ಳಿಯಲ್ಲಿ ದೊಡ್ಡಮಟ್ಟದಲ್ಲಿ ಪುಸ್ತಕ ಭಂಡಾರ ಆರಂಭವಾಗಿರುವುದು ಪುಸ್ತಕ ಪ್ರೇಮಿಗಳಲ್ಲಿ ಸಂತಸ ತಂದಿದೆ
-ವೇದರಾಣಿ ದಾಸನೂರ ಗೋಟಗೋಡಿ, ರಾಕ್ ಗಾರ್ಡನ್ ಕಲಾ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.