ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣಕ್ಕೆ ನೆರವು: ಸರೋಜ ಕಟಿಯಾ‌

Last Updated 12 ಡಿಸೆಂಬರ್ 2021, 4:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹಿಳೆಯರ ಸಬಲೀಕರಣಕ್ಕೆ ಇನ್ನರ್‌ ವೀಲ್ ಕ್ಲಬ್ ಆಫ್ ಹುಬ್ಬಳಿ ಹಲವು ಜನಪರ ಯೋಜನೆಗಳನ್ನು ರೂಪಿಸುತ್ತಿದೆ’ ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷೆ ಸರೋಜ ಕಟಿಯಾ‌ ಹೇಳಿದರು.

ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳಿ ವತಿಯಿಂದ ಈಚೆಗೆ ಗೋಕುಲದಲ್ಲಿ ಗುಲಾಬಿ ಗಾಣದ ಎಣ್ಣೆ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ವಿನೂತನ ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದರು.

ಸರೋಜ ಕಟಿಯಾ ಅವರು ಘಟಕದ ಜವಾಬ್ದಾರಿಯನ್ನು ಗೋಕುಲದ ನಿವಾಸಿ ಸುವರ್ಣಾ ಹೊಸಮನಿಯವರಿಗೆ ಹಸ್ತಾಂತರಿಸಿದರು.

ಕ್ಲಬ್‌ನ ಪದಾಧಿಕಾರಿ ಲಕ್ಕ ಬೆಸರ್‌, ರುಕ್ಸಾನ್ ಕಿತ್ತೂರ, ಜ್ಯೋತಿ ಮಡಿಯನ್ ಜಮಖಂಡಿ, ರಾಧಿಕಾ ಗೋಖಲೆ,ನಿರ್ಮಲಾ, ಲಾರೆನ್ , ಸುಮ ಹಾರಾಮತಿ, ರಂಜನಾ, ರತ್ನಾ ಗುಲಾಸಿನಿ, ಜ್ಯೋತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT