ಭಾನುವಾರ, ಆಗಸ್ಟ್ 18, 2019
21 °C

ನೈರುತ್ಯ ರೈಲ್ವೆಗೆ ಪ್ರಶಸ್ತಿ

Published:
Updated:
Prajavani

ಹುಬ್ಬಳ್ಳಿ: ಮಾನವ ರಹಿತ ರೈಲ್ವೆ ಕ್ರಾಸಿಂಗ್‌ ತೆಗೆದುಹಾಕಿ ಸುರಕ್ಷತೆಗೆ ಆದ್ಯತೆ ನೀಡುವಲ್ಲಿ ಶೇ 100ರಷ್ಟು ಸಾಧನೆ ಮಾಡಿದ ಕಾರಣಕ್ಕಾಗಿ ರೈಲ್ವೆ ಮಂಡಳಿಯಿಂದ ನೈರುತ್ಯ ರೈಲ್ವೆ ಪ್ರಶಸ್ತಿಗೆ ಭಾಜನವಾಗಿದೆ.

ಹರಿಯಾಣದ ಅಂಬಾಲದಲ್ಲಿ ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್‌, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಹಾಗೂ ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುರಕ್ಷತೆಗೆ ಒತ್ತುಕೊಡುವ ಉದ್ದೇಶದಿಂದ ಭಾರತೀಯ ರೈಲ್ವೆ 2017–18ರಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ ತೆಗೆದು ಹಾಕುವ ಗುರಿಯೊಂದಿಗೆ ಯೋಜನೆ ಕೈಗೆತ್ತಿಕೊಂಡಿತ್ತು. 2018–19ರ ಅವಧಿಯಲ್ಲಿ ನೈರುತ್ಯ ರೈಲ್ವೆ 187 ಮಾನವ ರಹಿತ ರೈಲ್ವೆ ಕ್ರಾಸಿಂಗ್‌ ತೆಗೆದುಹಾಕಿ, ಕೆಲ ಕಡೆ ಕೆಳಸೇತುವೆ, ಮೇಲ್ಸೆತುವೆ, ಸಬ್‌ ವೇ ಗಳನ್ನು ನಿರ್ಮಿಸಿದೆ. ಹೋದ ವರ್ಷ ಅಕ್ಟೋಬರ್‌ನಲ್ಲಿ ನೈರುತ್ಯ ರೈಲ್ವೆ ತನ್ನ ಗುರಿ ಮುಟ್ಟಿದೆ.

ಆಚರಣೆ ಇಂದು:  ಗದಗ ರಸ್ತೆಯಲ್ಲಿರುವ ರೈಲ್ವೆ ಕಚೇರಿಯ ಚಾಲುಕ್ಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ಜುಲೈ 23 (ಮಂಗಳವಾರ) ಮಧ್ಯಾಹ್ನ 3.30ಕ್ಕೆ 64ನೇ ರೈಲ್ವೆ ವಾರದ ಆಚರಣೆ ಜರುಗಲಿದೆ. ಎ.ಕೆ. ಸಿಂಗ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಲಿದ್ದಾರೆ.

Post Comments (+)