ಗುರುವಾರ , ಆಗಸ್ಟ್ 11, 2022
23 °C
14 ವರ್ಷದೊಳಗಿನವರ ಕ್ರಿಕೆಟ್‌: ಅಬ್ದುಲ್‌ ಸಮಿ ಅರ್ಧಶತಕ

ಬಿಡಿಕೆ ತಂಡಕ್ಕೆ ಚಾಂಪಿಯನ್‌ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ’ಸ್ಕೈ 360’ ಸಲ್ಯೂಷನ್‌ 14 ವರ್ಷದೊಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಫಸ್ಟ್‌ ಕ್ರಿಕೆಟ್ ಅಕಾಡೆಮಿ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಭಾನುವಾರ ಟಾಸ್ ಗೆದ್ದು ಬ್ಯಾಟ್‌ ಮಾಡಿದ ಎಚ್‌ಸಿಎ ತಂಡ ನಿಗದಿತ 30 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 125 ರನ್‌ ಗಳಿಸಿತು. ಈ ತಂಡದ ಅನ್ಮೋಲ್‌ ಪಗಾಡ್‌ (41) ಗರಿಷ್ಠ ಸ್ಕೋರರ್‌ ಎನಿಸಿದರು. ಬಿಡಿಕೆ ತಂಡದ ಭುವನ್ ಬಿಸಿಡೋಣಿ ಎರಡು ವಿಕೆಟ್‌ ಉರುಳಿಸಿದರು.‌ ಬಿಡಿಕೆ ತಂಡ 23 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಅಬ್ದುಲ್‌ ಸಮಿ ದಿವಾನ್‌ಅಲಿ (58, 45ಎಸೆತ, 11ಬೌಂಡರಿ) ಮತ್ತು ರೋಹಿತ್‌ ಎಂ. ಯರೇಸೀಮಿ (22) ಮೊದಲ ವಿಕೆಟ್‌ಗೆ 61 ರನ್‌ ಕಲೆಹಾಕಿ ಗೆಲುವಿನ ಹಾದಿ ಸುಗಮ ಮಾಡಿದರು.

ವೈಯಕ್ತಿಕ ಪ್ರಶಸ್ತಿ: ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಯ ಪ್ರೀತಮ್‌ ಹುಲಕೊಪ್ಪ (ಅತ್ಯುತ್ತಮ ವಿಕೆಟ್‌ ಕೀಪರ್‌), ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ನ ಭುವನ ಬಿಸಿಡೋಣಿ (ಅತ್ಯುತ್ತಮ ಬೌಲರ್‌), ಇದೇ ತಂಡದ ರೋಹಿತ್‌ ಯರೇಸೀಮಿ (ಅತ್ಯುತ್ತಮ ಬ್ಯಾಟ್ಸ್‌ಮನ್‌) ಮತ್ತು ಎಚ್‌ಸಿಎ ತಂಡದ ಆದಿತ್ಯ ಉಮ್ರಾಣಿ (ಅತ್ಯುತ್ತಮ ಆಲ್‌ರೌಂಡರ್‌) ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಸ್ವರ್ಣ ಗ್ರೂಪ್‌ನ ಡಾ.ವಿ.ಎಸ್‌.ವಿ. ಪ್ರಸಾದ ಮಾತನಾಡಿ ’ಈಗಿನ ಮಕ್ಕಳಲ್ಲಿ ಉತ್ತಮ ಪ್ರತಿಭೆಯಿದ್ದು, ಭವಿಷ್ಯದಲ್ಲಿ ಭಾರತ ತಂಡ ಮತ್ತು ಐಪಿಎಲ್‌ನಲ್ಲಿ ಮಿಂಚಬೇಕು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.