ಶನಿವಾರ, ಮೇ 21, 2022
23 °C

ವಿವಿಧ ಕಾಮಗಾರಿಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಿವಿಧೆಡೆ ₹1.19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.

ಅಂಚಟಗೇರಿ ಓಣಿಯಲ್ಲಿ ₹10 ಲಕ್ಷದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ, ಬಾಪೂಜಿ ನಗರದಲ್ಲಿ ₹15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸದಾಶಿವನಗರ ಹಾಗೂ ಬೀರಬಂದ್ ಓಣಿಯಲ್ಲಿ ₹29.41 ಲಕ್ಷದಲ್ಲಿ ತೆರೆದ ಚರಂಡಿ, ಸಿಸಿ ಪೇವಿಂಗ್, ಒಳಚರಂಡಿ ಕೊಳವೆ ಅಳವಡಿಕೆ, ಸದಾಶಿವನಗರ ಮತ್ತು ನೂರಾನಿ ಪ್ಲಾಟಿನಲ್ಲಿ ₹41 ಲಕ್ಷ ವೆಚ್ಚದಲ್ಲಿ ಸಿಸಿ ಪೇವಿಂಗ್, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಖಾದ್ರಿಯಾ ಟೌನ್‍ನಲ್ಲಿ ₹23.34 ಲಕ್ಷದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಸಿಸಿ ಪೇವಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಪಾಲಿಕೆ ಸದಸ್ಯರಾದ ಸುನೀತಾ ಬುರಬುರೆ, ಶೀಲಾ ಕಾಟ್ಕರ್, ಬೀಬಿ ಮರಿಯಮ್ಮ ಮುಲ್ಲಾ, ಮನ್ಸೂರಾ ಮುದಗಲ್, ನಜೀರ್ ಹೊನ್ಯಾಳ, ಹುಸೇನಬೀ ನಾಲತ್ತವಾಡ, ಮೌಲಾನ ಮನ್ಸೂರ್ ಆಲಂ, ಮೌಲಾನ ಮನ್ನನ್, ಮುಖಂಡರಾದ ಪ್ರಕಾಶ ಬುರಬುರೆ, ಸೈಯದ್ ಸಲೀಂ ಮುಲ್ಲಾ, ಮನೋಹರ ವಾಲಿ, ಮುಸ್ತಾಕ್ ಮುದಗಲ್, ಇರ್ಫಾನ್ ನಾಲತ್ತವಾಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.