ಶುಕ್ರವಾರ, ನವೆಂಬರ್ 27, 2020
18 °C

ಬೈಕ್‌ಗಳ ಕಳ್ಳತನ: ಒಂಬತ್ತು ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಬೈಕ್‌ ಕಳ್ಳತನ ಪ್ರಕರಣಗಳನ್ನು ಎಪಿಎಂಸಿ ಮತ್ತು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಟ್ಟು 13 ಬೈಕ್‌ಗಳನ್ನು ವಶಪಡಿಸಿಕೊಂಡು, ಒಂಬತ್ತು ಜನರನ್ನು ಬಂಧಿಸಿದ್ದಾರೆ.

ದೇಶಪಾಂಡೆ ನಗರ, ಅಂಚಟಗೇರಿ ಓಣಿ ಮತ್ತು ಗದಗನಲ್ಲಿ ಬೈಕ್‌ಗಳನ್ನು ‌ಕಳ್ಳತನ ಮಾಡಿದ್ದ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ವಶಪಡಿಸಿಕೊಂಡು, ವಡ್ಡರ ಓಣಿಯ ಹನುಮಂತ ಮಣ್ಣವಡ್ಡರ, ರಾಯನಾಳ ಗ್ರಾಮದ ಚಂದ್ರಶೇಖರ ಗುದ್ದಿ, ಆನಂದ ನಗರ ಕೃಷ್ಣ ಕಾಲೊನಿಯ ವಿನಾಯಕ ಮೈಸೂರ, ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದ ವೀರೇಶ ಅಂಗಡಿ ಎಂಬುವರನ್ನು ಬಂಧಿಸಿದ್ದಾರೆ. 11 ಬೈಕ್‌ಗಳ ಮೌಲ್ಯ ₹7.87 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಎಪಿಎಂಸಿ ಪೊಲೀಸರು ರಾಮಲಿಂಗೇಶ್ವರ ನಗರದ ಕುಮಾರ ವಡ್ಡರ, ತಮಿಳುನಾಡಿನ ಕೃಷ್ಣಗಿರಿಯ ಕಿರಣ, ಕನಕಪುರದ ಸಂಜೀವ ಕೆಂಚಪ್ಪ, ರಾಮನಗರದ ಶಿವಕುಮಾರ ಬಚ್ಚೇಗೌಡ, ಹೊಳೆನರಸಿಪುರ ದೀಪಕ ಅವರನ್ನು ಬಂಧಿಸಿ ₹70 ಸಾವಿರ ಮೌಲ್ಯದ ಎರಡು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು