ಧಾರವಾಡ: ಲಂಚ ಪ್ರಕರಣದಲ್ಲಿ ಕುಂದಗೋಳದ ಭೂಮಾಪನ ಇಲಾಖೆ ಸರ್ವೆಯರ್ ರಾಘವೇಂದ್ರಗೆ ನಾಲ್ಕು ವರ್ಷ ಜೈಲು, ₹ 20 ಸಾವಿರ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ವಿಶೇಷ ಕೋರ್ಟ್ ಶನಿವಾರ ವಿಧಿಸಿದೆ.

ನ್ಯಾಯಾಧೀಶರಾದ ಜರೀನಾ ಅವರು ಆದೇಶ ನೀಡಿದ್ದಾರೆ.

ಏನಿದು ಪ್ರಕರಣ?: ಕುಂದಗೋಳ ತಾಲ್ಲೂಕು ಶಿರೂರಿನ ಮಲ್ಲಿಕಾರ್ಜುನಗೌಡ ಅವರು ಜಮೀನು ಅಳತೆ, ಪೋಡಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಸರ್ವೆಯರ್ ರಾಘವೇಂದ್ರ ಅವರು ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2019 ಜೂನ್ 3ರಂದು ಕುಂದಗೋಳದ ಕೆಎಸ್ಆರ್ಟಿಸಿ ಕ್ಯಾಂಟೀನ್ಲ್ಲಿ ರಾಘವೇಂದ್ರ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಬಿ.ಎ.ಜಾಧವ ಅವರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಎಸ್.ಶಿವಳ್ಳಿ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.