ಭಾನುವಾರ, ಆಗಸ್ಟ್ 25, 2019
27 °C

ಆ. 11ರಂದು ಹುಬ್ಬಳ್ಳಿಯಲ್ಲಿ ವಧು–ವರ ಸಮಾವೇಶ

Published:
Updated:

ಹುಬ್ಬಳ್ಳಿ: ಗುರು ಅಸೋಸಿಯೇಟ್ಸ್‌ ಸಂಸ್ಥೆ ಆ. 11ರಂದು ಬೆಳಿಗ್ಗೆ 10 ಗಂಟೆಯಿಂದ ಮಿನಿವಿಧಾನ ಸೌಧದ ಎದುರು ಇರುವ ಕೆ.ಸಿ.ಸಿ. ಬ್ಯಾಂಕ್‌ ಸಭಾಭವನದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತರ ವಧು–ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಸಮಾವೇಶ ಹಮ್ಮಿಕೊಂಡಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘11 ವರ್ಷಗಳಿಂದ ಈ ಸಮಾವೇಶ ಮಾಡಿಕೊಂಡುಬಂದಿದ್ದೇವೆ. ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳ ಪಂಗಡಗಳ ವಧು–ವರರ ಸಮಾವೇಶ ಕೂಡ ನಡೆಯಲಿದೆ. ಮಧ್ಯಾಹ್ನ 1ರಿಂದ 4 ಗಂಟೆ ತನಕ ವಿಧುರರ ಹಾಗೂ ವಿಚ್ಛೇದಿತರಿಗಾಗಿ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಹೆಸರು ನೋಂದಾಯಿಸಲು ಧಾರವಾಡ ರೈಲ್ವೆ ನಿಲ್ದಾಣದ ಬಳಿ ಇರುವ ಸೇವಾ ಕೇಂದ್ರ ಅಥವಾ ಮೊ. 7349451628 ಸಂಪರ್ಕಿಸಿ.

Post Comments (+)