ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚನಗೊಳಿಸಿದ ಚಕ್ಕಡಿ ಸ್ಪರ್ಧೆ

Last Updated 4 ಏಪ್ರಿಲ್ 2022, 2:58 IST
ಅಕ್ಷರ ಗಾತ್ರ

ಅಳ್ನಾವರ: ಅಲ್ಲಮಪ್ರಭು ಜಾತ್ರಾ ಮಹೋತ್ಸವ ಅಂಗವಾಗಿ ಹೊನ್ನಾಪೂರ ಗ್ರಾಮದಲ್ಲಿ ನಡೆದ ಚಕ್ಕಡಿ ಓಡಿಸುವ ಸ್ಪರ್ಧೆ ನಡೆಯಿತು. ಸ್ಪರ್ಧೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ
ಸೇರಿದ್ದರು.

ಹೊನ್ನಾಪೂರ, ಕಲಕೇರಿ, ಮುಗದ, ಚಿಕ್ಕ ಮಲ್ಲಿಗವಾಡ ಗ್ರಾಮಗಳ 12 ಜೋಡಿ ಚಕ್ಕಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಹೊಲಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಪೈಪೋಟಿಯಲ್ಲಿ ಸಾಗಿದ ಚಕ್ಕಡಿಗಳ ವೇಗ ಕಂಡು ಜನರು ಕೇಕೆ ಹಾಕಿದರು. ಚಪ್ಪಾಳೆ ತಟ್ಟಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.

ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಗ್ರಾಮದ ಹಿರಿಯರಾದ ಪ್ರಭು ಕುಂಬಾರ ಹಾಗೂ ಎಚ್ .ಆರ್. ಸನದಿ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಹಿರಿಯರಾದ ಮಹಾವೀರ ಧರೆಣ್ಣವರ, ಮಲ್ಲಯ್ಯ ಮಠಪತಿ, ಭರಮಾ ಪರಸಣ್ಣವರ ಇದ್ದರು.

ಫಲಿತಾಂಶ: ಚಿಕ್ಕಮಲ್ಲಿಗವಾಡ ಗ್ರಾಮದ ನಾಗು ಪ್ರಸನ್ನ ಜೋಡಿ ಪ್ರಥಮ ಸ್ಥಾನ ಪಡೆದು ₹10,000 ಬಹುಮಾನ ಪಡೆಯಿತು. ಹೊನ್ನಾಪೂರದ ಬಸಪ್ಪ ಬಾಬು ಪಾಟಲ ಅವರ ಜೋಡಿ ದ್ವಿತೀಯ ಸ್ಥಾನ ಗಳಿಸಿ ₹ 7,000 ಹಾಗೂ ಲಗಮನ್ನಾ ನಾಯಕ ಅವರ ಜೋಡಿ ತೃತೀಯ ಸ್ಥಾನ ಪಡೆದು ₹ 5,000 ಬಹುಮಾನ ಪಡೆಯಿತು. ಎರಡು ಕಿ.ಮೀ. ಓಡಿ ಮತ್ತೆ ಮರಳಿ ಬರುವ ಸ್ಪರ್ಧೆ ಇದಾಗಿತ್ತು. ಸಂಜೆ ದೇವಸ್ಥಾನದ ಆವರಣದಿಂದ ಹೊರಟ ಪಲ್ಲಕ್ಕಿ ಉತ್ಸವ ಗ್ರಾಮದ ಮುಖ್ಯ ಬೀದಿಯಲ್ಲಿ ಸಂಚರಿಸಿತು. ಹಬ್ಬದ ಕಳೆ ಮನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT