ಗುರುವಾರ , ಜುಲೈ 29, 2021
27 °C

ಹುಬ್ಬಳ್ಳಿ ಘಂಟಿಕೇರಿ ಕೋವಿಡ್ ಕೇಂದ್ರದಲ್ಲಿ ಕರೋಕೆ ರಾಗಕ್ಕೆ ಧ್ವನಿಯಾದ ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿಯ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿರುವ ಲಕ್ಷಣರಹಿತ ಕೊರೊನಾ ಸೋಂಕಿತರು ಶುಕ್ರವಾರ ಕರೋಕೆ ರಾಗಕ್ಕೆ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ನೀಡಿದ್ದ ಸೂಚನೆ ಮೇರೆಗೆ ಕರೋಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಗೊಂಬೆ ಹೇಳುತೈತಿ, ಗೊಂಬೆ‌ ಹೇಳುತೈತಿ ನೀನೇ‌ ರಾಜಕುಮಾರ’ ಹಾಡನ್ನು ಹಾಡಲಾಯಿತು.

‘ಏನಾದರಾಗಲಿ ಮುಂದೆ‌ ಸಾಗು ನೀ’ ಹಾಡಿಗೆ ಬಹುತೇಕರು ದನಿಯಾದರು. ಕೆಲಕಾಲ ಮಾನಸಿಕ ಒತ್ತಡ‌ ಮರೆತು ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.