ಶನಿವಾರ, ಮೇ 21, 2022
23 °C

ಸಂಭ್ರಮದಲ್ಲಿ ಕ್ರೈಸ್ತ ಸಮುದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ನಿಂದ ಎರಡು ವರ್ಷ ಕ್ರಿಸ್‌ಮಸ್‌ ಕಳೆಗುಂದಿತ್ತು. ಪ್ರಸ್ತುತ ವರ್ಷ ಸಂಭ್ರಮಕ್ಕೆ ತುಸು ಪೂರಕವಾದ ವಾತಾವರಣವಿದ್ದು, ಕ್ರೈಸ್ತ ಸಮುದಾಯದವರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ನಗರದಲ್ಲಿನ ಚರ್ಚ್‌ಗಳೆಲ್ಲ ಬಣ್ಣ, ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿ
ಸುತ್ತಿವೆ. ಕ್ರಿಸ್‌ಮಸ್ ಟ್ರೀಗಳಿಗೆ ದೀಪ ಅಳವಡಿಸಲಾಗಿದೆ. ಯೇಸುವಿನ ಜನ್ಮ, ಪವಾಡ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತರು ಮನೆಗಳ ಎದುರು ಆಕಾಶಬುಟ್ಟಿ ಅಳವಡಿಸಿದ್ದಾರೆ. ಮಕ್ಕಳಿಗೆ ಸಂತಾಕ್ಲಾಸ್ ವೇಷಭೂಷಣ ತೊಡಿಸಿ, ಉಡುಗೊರೆ ನೀಡುವ ಕಾರ್ಯ
ಕ್ರಮಗಳು ಚರ್ಚ್‌ನಲ್ಲಿ ನಡೆಯುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮ, ದೃಶ್ಯ ರೂಪಕ, ನಾಟಕಗಳು ಸಹ ನಡೆದವು. ಕೇಕ್, ಕ್ಯಾಲೆಂಡರ್ ವಿತರಣೆ ಮಾಡಲಾಯಿತು. ಶನಿವಾರ ನಗರದ ವಿವಿಧ ಚರ್ಚ್‌ಗಳಲ್ಲಿ ಯೇಸು ಆರಾಧನೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು