ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್ ಸಡಗರ: ಶಾಂತಿಧೂತನ ಸ್ಮರಣೆ

ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ; ಕೇಕ್ ಹಂಚಿ ಸಂಭ್ರಮ
Last Updated 26 ಡಿಸೆಂಬರ್ 2021, 2:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಚರ್ಚ್‌ಗಳಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಶನಿವಾರ ಸಡಗರಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಜರುಗಿತು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು. ಚಿಣ್ಣರಿಂದ ಹಿರಿಯರವರೆಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಾಚರಿಸಿದರು. ಕೇಕ್ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಅಂಗವಾಗಿ ಚರ್ಚ್‌ಗಳನ್ನು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.ಕ್ರಿಸ್‌ಮಸ್‌ ಟ್ರೀಗಳು ಗಮನ ಸೆಳೆದವು. ಯೇಸು ಜನ್ಮದಿನದ ವೃತ್ತಾಂತ ಸಾರುವ ಬಾಲ ಗೋದಲಿಗಳು ಚರ್ಚ್ ಆವರಣದಲ್ಲಿ ಗಮನ ಸೆಳೆದವು. ಸಾಂತಾಕ್ಲಾಸ್ ವೇಷಧಾರಿಗಳುಚರ್ಚ್ ಆವರಣದಲ್ಲಿ ಮಕ್ಕಳಿಗೆ ಚಾಕೊಲೇಟ್ ವಿತರಿಸಿದರು.

ಕೇಶ್ವಾರಪುದ ಸಂತ ಜೋಸೆಫ್ ಕ್ಯಾಥೊಲಿಕ್ ಚರ್ಚ್‌, ಶಾಂತಿನಗರದ ಇನ್ಫಂಟ್ ಜೀಸಸ್ ಚರ್ಚ್, ಚನ್ನಮ್ಮ ವೃತ್ತದ ಬಳಿಯ ಮೈಯರ್ ಸ್ಮರಣಾರ್ಥ ಚರ್ಚ್, ಗಾಂಧಿನಗರದ ಕೆಥೆಡ್ರೆಲ್ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಹೆಚ್ಚಿನ ಕ್ರೈಸ್ತರು ಪಾಲ್ಗೊಂಡಿದ್ದರು. ಬೈರಿದೇವರಕೊಪ್ಪದ ಶೈಲ್‌ ಶ್ರೀ ಮಂಜುನಾಥ ಸಂಸ್ಥೆಯ ಕಿಡ್ಸ್‌ ವರ್ಲ್ಡ್ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಸಾಂತಾಕ್ಲಾಸ್‌ ವೇಷತೊಟ್ಟು ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ವಿವಿಧ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಿ, ಕುಟುಂಬ ಸಮೇತ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT