ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನಲ್ಲೇ ಮೊದಲ ಬಾರಿಗೆ ಮಲೆನಾಡಿನ ಕಾಫಿ ಹಾಗೂ ಮಸಾಲೆ ಪದಾರ್ಥಗಳ ಘಮಲು ಶುರುವಾಗಿದೆ. ತಾಲ್ಲೂಕಿನ ಗುಡಗೇರಿ ಗ್ರಾಮದ ರೈತ ಶಿವಪ್ಪ ಪರಪ್ಪ ದ್ಯಾವಪ್ಪನವರ ಮಲೆನಾಡಿನ ಕಾಫಿ ಹಾಗೂ ಮಸಾಲೆ ಪದಾರ್ಥಗಳನ್ನು ಕಳೆದ ಮೂರು ವರ್ಷಗಳಿಂದ ಬೆಳೆಯುತ್ತಿದ್ದು, ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಿಯುಸಿವರೆಗೆ ಓದಿರುವ 62 ವರ್ಷದ ಈ ರೈತರದ್ದು ಮೂಲತಃ ಕೃಷಿ ಕುಟುಂಬ. ತಮ್ಮ 55 ಎಕರೆ ಕೃಷಿ ಭೂಮಿಯಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತ, ಸಾವಯವ ಮತ್ತು ಅರಣ್ಯ ಕೃಷಿಗೆ ಒತ್ತು ನೀಡುತ್ತ ಬಂದಿದ್ದಾರೆ.

2500 ಹೆಬ್ಬೇವು, 500 ಕಾಳುಮೆಣಸು, 300 ಏಲಕ್ಕಿ, 100 ಅಡಿಕೆ, 6 ಜಾಯಿಕಾಯಿ, 6 ಮಿಡಿಮಾವು, 10 ದಾಲ್ಚಿನಿ, 10 ಲವಂಗ ಸೇರಿ ವಿವಿಧ ಮಸಾಲೆ ಪದಾರ್ಥಗಳ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ 9 ಎಕರೆಯಲ್ಲಿ ಸಿರಿಧಾನ್ಯ ಬೆಳೆಗಳಾದ ಸಾಮೆ, ನವಣೆ, ಊದಲು, ಅರ್ಕ, ಕೊರ್ಲೆ, 9 ಎಕರೆಯಲ್ಲಿ ಗೋವಿನಜೋಳ, 6 ಎಕರೆ ಸೋಯಾಬಿನ್, 2 ಎಕರೆ ಕುಸುಬಿ, ಬಿ.ಟಿ. ಹತ್ತಿ, ಆಳ್ವಿ, ಚಿಯಾ ಸೀಡ್ಸ್ ಬೆಳೆಗಳನ್ನೂ ಬೆಳೆದಿದ್ದಾರೆ. 4 ಹಲಸು, 4 ಮಿಡಿ ಮಾವು, 8 ತೆಂಗಿನ ಮರಗಳನ್ನು ಬೆಳೆಸಿದ್ದಾರೆ.

‘ಒಂದು ಬೆಳೆ ಕೈ ಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ ಎನ್ನುವ ಉದ್ದೇಶದಿಂದ ಮಿಶ್ರ ಕೃಷಿಗೆ ಮುಂದಾದೆ. ಮಣ್ಣಿನ ಫಲವತ್ತತೆ ಕಾಪಾಡುವ ಜೊತೆಗೆ ಗುಣಮಟ್ಟದ ಬೆಳೆ ಕೈಸೇರಬೇಕೆಂಬ ಸದಾಶಯದಿಂದ ಸಾವಯವ ಕೃಷಿ ಮಾಡುತ್ತಿರುವೆ’ ಎಂದು ರೈತ ಶಿವಪ್ಪ ಪರಪ್ಪ ದ್ಯಾವಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ತಾಲ್ಲೂಕಿನಲ್ಲೇ ಮಸಾಲೆ ಪದಾರ್ಥಗಳನ್ನು ಮತ್ತು ಮಲೆನಾಡಿನ ಕಾಫಿ ಬೆಳೆಯನ್ನು ಬೆಳೆದ ಮೊದಲ ರೈತ ನಾನು. ಶೃಂಗೇರಿ ಸಮೀಪದ ಕೊಪ್ಪದ ಸ್ನೇಹಿತರು ಅರೇಬಿಕಾ ತಳಿಯ 10 ಕಾಫಿ ಸಸಿಗಳನ್ನು ಉಚಿತವಾಗಿ ನೀಡಿದರು. ₹50ಕ್ಕೆ ಒಂದರಂತೆ 1000 ಅಡಿಕೆ ಸಸಿಗಳನ್ನು, ₹30ಕ್ಕೆ ಒಂದರಂತೆ ಪನ್ವೀರ್ 1 ತಳಿಯ ಕಾಳಮೆಣಸಿನ ಸಸಿಗಳನ್ನು, ₹10ಕ್ಕೆ ಒಂದರಂತೆ ನೆಲ್ಲಾಣಿ ಗೋಲ್ಡ್ ತಳಿಯ 10 ಏಳಕ್ಕಿ ಸಸಿಗಳನ್ನು ತಂದಿರುವೆ. ಶಿವಮೊಗ್ಗದ ಹೊಸನಗರದಿಂದ 2 ಸರ್ವ ಮಸಾಲಾ ಸಸಿಗಳನ್ನು ತಂದು ನಾಟಿ ಮಾಡಿರುವೆ’ ಎಂದು ಹೇಳಿದರು.

ಸಾವಯವ ಗೊಬ್ಬರ ಬಳಕೆ: ‘ಮನೆಯಲ್ಲಿ 2 ಹಳ್ಳಿಕಾರ ತಳಿಯ ಹಸು ಹಾಗೂ 2 ಎಚ್.ಎಫ್ ತಳಿಯ ಹಸುಗಳಿದ್ದು ಅವುಗಳಿಂದ ಸಿಗುವ ಸಗಣಿಯನ್ನೇ ಗೊಬ್ಬರವಾಗಿ ಬಳಸುತ್ತೇವೆ. ಜೊತೆಗೆ ಜೀವಾಮೃತ, ಎರೆಹುಳು ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತೇವೆ. 2 ಕೊಳವೆಬಾವಿ, 25 ಸ್ಪ್ರಿಂಕ್ಲರ್ ಇದ್ದು, ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕಳೆ ನಿರ್ವಹಣೆಗೆ ರೂಟರ್, ಚಾಪ್ ಕಟರ್ ಯಂತ್ರಗಳನ್ನು ಬಳಸುತ್ತೇವೆ’ ಎಂದು ತಿಳಿಸಿದರು.

ಸಿರಿಧಾನ್ಯ ಬೆಳೆಗಳು ಹೆಚ್ಚು ನೀರು ನಿರ್ವಹಣೆಯನ್ನು ಬೇಡುವುದಿಲ್ಲ. ಜೊತೆಗೆ ಕೃಷಿ ಇಲಾಖೆಯು ಈ ಬೆಳೆಗಳಿಗೆ ಎಕರೆಗೆ ₹4 ಸಾವಿರ ಪ್ರೋತ್ಸಾಹಧನ ನೀಡುವುದರಿಂದ ರೈತರಿಗೆ ಅನುಕೂಲವಾಗಿದೆ.
– ಶಿವಪ್ಪ ಪರಪ್ಪ ದ್ಯಾವಪ್ಪನವರ, ರೈತ ಗುಡಗೇರಿ ಗ್ರಾಮ ಕುಂದಗೋಳ

ಪ್ರಶಸ್ತಿ ಉಪನ್ಯಾಸ

ಶಿವಪ್ಪ ಪರಪ್ಪ ದ್ಯಾವಪ್ಪನವರ ಅವರು ಆತ್ಮಾಯೋಜನೆ ಅಡಿ 2020–21ರಲ್ಲಿ ಸಮಗ್ರ ಕೃಷಿ ವಿಭಾಗದಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 2023–24ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.