ಭಾನುವಾರ, ಆಗಸ್ಟ್ 1, 2021
22 °C

ನಿವೃತ್ತಿ ದಿನದಂದು ಶ್ಲಾಘನೀಯ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಶುಕ್ರವಾರ ನಿವೃತ್ತಿ ಹೊಂದಿದ ಸಾರಿಗೆ ನಿಯಂತ್ರಕ ಚನ್ನಬಸಪ್ಪ ಮಹಾದೇವಪ್ಪ ಯಳಲಿ ವಿಭಿನ್ನವಾಗಿ ತಮ್ಮ ವೃತ್ತಿಗೆ ವಿದಾಯ ಹೇಳಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಯಲು 400 ಮಾಸ್ಕ್‌ಗಳು ಹಾಗೂ 400 ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿವಿಧ ಬಗೆಯ ಔಷಧೀಯ ಸಸಿಗಳನ್ನು ವಿತರಿಸಿದರು. ಯಳಲಿ ಅವರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಗೌರವಿಸಿದರು.

ಯಳಲಿ ಹಾಗೂ ಅವರ ಪುತ್ರ ರುದ್ರಪ್ಪ ಸೇರಿಕೊಂಡು ಮಾಸ್ಕ್‌ ಹಾಗೂ ಒಂದೆಲಗ (ಬ್ರಾಹ್ಮಿ), ದೊಡ್ಡಪತ್ರೆ, ರಾಮ ತುಳಸಿ, ಕೃಷ್ಣ ತುಳಸಿ, ಶಂಕರ ಪುಷ್ಟಿ, ಲೋಳೆಸರ, ಗರುಡ ಪಾತಾಳ, ಕಹಿಬೇವು ಹೀಗೆ 400 ಔಷಧ ಸಸ್ಯಗಳನ್ನು ನೀಡಿದ್ದು ವಿಶೇಷವಾಗಿತ್ತು.

ಸೋಂಕಿನ ಭೀತಿಯಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಳಲಿ ಅವರು ಕೋವಿಡ್‌ 19 ಅಪಾಯದ ಸಮಯದಲ್ಲಿಯೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ದಿನದಂದು ಕೂಡ ಅರ್ಥಪೂರ್ಣ ಕೆಲಸ ಮಾಡಿದ್ದಾರೆ ಎಂದು ರಾಮನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು.  ನಿಲ್ದಾಣದ ಅಧಿಕಾರಿಗಳಾದ ಕೋಟೂರ, ಪಿ.ಎಸ್. ಶೆಟ್ಟರ, ಸಾರಿಗೆ ನಿಯಂತ್ರಕರು ಪಾಲ್ಗೊಂಡಿದ್ದರು.

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಬಸ್‌: ರಾಜ್ಯದಲ್ಲಿ ಲಾಕ್‌ಡೌನ್‌ ಆದೇಶವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದರಿಂದ ಆ. 1ರಿಂದ ಪೂರ್ಣಪ್ರಮಾಣದಲ್ಲಿ ಬಸ್‌ಗಳ ಸಂಚಾರ ಇರಲಿದೆ. ಈ ಮೊದಲು ವಾರದಲ್ಲಿ ಆರು ದಿನ ಸಂಚಾರಕ್ಕೆ ಅವಕಾಶವಿತ್ತು. ಈಗ ದಿನದ 24 ಗಂಟೆಯೂ ಬಸ್‌ಗಳ ಸಂಚಾರ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.