ಹುಬ್ಬಳ್ಳಿ: ‘ಪೌರ ಕಾರ್ಮಿಕರಿಗೆ ಸಮವಸ್ತ್ರ, ಆರೋಗ್ಯ ಸೇವೆ,ಉಪಾಹಾರ, ಬಡ್ತಿ, ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲುಪಾಲಿಕೆ ಬದ್ಧವಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

ಅಶೋಕ ನಗರದ ಕನ್ನಡ ಭವನದಲ್ಲಿ ಪಾಲಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಅ. 1ರಿಂದ ಕಾರ್ಮಿಕರಿಗೆ ಇಸಿಜಿ, ರಕ್ತ ಪರೀಕ್ಷೆ ಸೇರಿದಂತೆ ದೇಹದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗುವುದು’ ಎಂದರು.

ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ‘ಸೆ.26ರಂದುರಾಷ್ಟ್ರಪತಿಗೆ ಹಮ್ಮಿಕೊಂಡಿರುವ ಪೌರ ಸನ್ಮಾನ ಸಮಾರಂಭದಲ್ಲಿ ಕಾರ್ಮಿಕರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಪೌರ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗಂಗಾಧರ ಟಗರಗುಂಟಿ, ‘ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪೌರ ಕಾರ್ಮಿಕರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಸನ್ಮಾನ: ನಿವೃತ್ತ ಪೌರ ಕಾರ್ಮಿಕರಾದ ಮುಶೆವ್ವ ಮಾದರ, ಪಾರ್ವತೆವ್ವ ಕುಂದಗೋಳ, ಪರಶುರಾಮ ಮಾದರ, ಗಂಗವ್ವ ಮಾದರ, ಈರಪ್ಪ ಪಾಮಡಿ, ಸಿದ್ದಪ್ಪ ದೊಡ್ಡಮನಿ, ಲಕ್ಷ್ಮವ್ವ ವಗರನಾಳ, ಭಾಗಿರತೆವ್ವ ಬೆಳಗುರಕಿ, ಪ್ರಕಾಶ ಪೆರೂರ, ರುಕ್ಕವ್ವ ರಾಮಯ್ಯನವರ, ಚಂದ್ರವ್ವ ಹಲಗಿಯವರ, ಮುತ್ಯಾಲವ್ವ ಪೆರೂರ, ಮಲ್ಲವ್ವ ಬೆಣಕಲ್ಲ, ಬಸಪ್ಪ ಯರನಾಳ, ಮುತ್ಯಾಲವ್ವ ಕದರಗುಂಡಿ, ಲಕ್ಷ್ಮವ್ವ ನಾಗಸಮುದ್ರ, ಲಕ್ಷ್ಮವ್ವ ದೇವಣ್ಣ, ಶಿವಪ್ಪ ಚಲವಾದಿ, ರಾಧವ್ವ ಗುಡಿಹಾಳ, ಮಲ್ಲವ್ವ ಹರಿಜನ, ಯಲ್ಲವ್ವ ಕೆಂಪಣ್ಣವರ, ಶಿವಪ್ಪ ರಣತೂರ, ಕಸ್ತೂರೆವ್ವ ಕೇಲೂರ, ನಂದವ್ವ ಕೆಲವೂರ ಹಾಗೂ ಯಮುನಪ್ಪ ಬಿಜಾಪುರ ಅವರನ್ನು ಸನ್ಮಾನಿಸಲಾಯಿತು. ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು.

ಪುರಸ್ಕಾರ: ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಕಾರ್ಮಿಕರ ಮಕ್ಕಳಾದ ಅಕ್ಷತಾ ಅಶೋಕ ವಜ್ಜನವರ, ಪ್ರಜ್ವಲ್ ಕಮಲಾಪುರ, ಅಕ್ಷತಾ ರಾಮಾಂಜನೇಯ ಸಿಂಗನೂಲ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಅಮನ ಅಶೋಕ ವಂಕರಾಜ, ರಾಧಿಕಾ ಶಿಕ್ಕಲಗಾರ, ಪವಿತ್ರ ಕಾಶಿನಾಥ ಪೆರೂರು, ಉದಯ ವೆಂಕಟೇಶ ಟಗರಗುಂಟಿ ಹಾಗೂ ಯಶವಂತ ರಮೇಶ ದೊಡ್ಡಮನಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯ ಸುರೇಶ ಬೇದರೆ, ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳ್ಳಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮಪ್ಪ ಕೆಂಪಣ್ಣವರ, ನಿಂಗಪ್ಪ ಮೊರಬದ, ದುರ್ಗಪ್ಪ ವೀರಾಪುರ, ಬಸಪ್ಪ ಮಾದರ, ಹೊನ್ನಪ್ಪ ದೇವಗಿರಿ, ರಮೇಶ ರಾಮಯ್ಯನವರ, ವೆಂಕಟೇಶ ಟಗರಗುಂಟಿ, ಅಶೋಕ ವಂಕರಾಜ, ಮರಿಯಪ್ಪ ಬಾಗಲ್ವಾಡ ಇದ್ದರು.

ವಲಯ ಆಯುಕ್ತ ಎಸ್.ಸಿ. ಬೇವೂರ ಸ್ವಾಗತಿಸಿದರು. ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ವಂದಿಸಿದರು. ಜ್ಯೋತಿ ನಿರೂಪಣೆ ಮಾಡಿದರು.

ಅಸಮಾಧಾನ: ತಮ್ಮನ್ನು ವೇದಿಕೆಗೆ ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಧಾರವಾಡ ಜಿಲ್ಲಾ ಎಸ್ಸಿ ಮತ್ತು ಎಸ್ಟಿ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ, ಕಾರ್ಯಕ್ರಮವನ್ನು ಬಹಿಷ್ಕರಿಸಿ ಸ್ಥಳದಿಂದ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.