ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ದೂರು

Published 12 ಮೇ 2024, 14:34 IST
Last Updated 12 ಮೇ 2024, 14:34 IST
ಅಕ್ಷರ ಗಾತ್ರ

ಕಲಘಟಗಿ: ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನ ನಿಂದಿಸಿ ಅಪಮಾನಿಸಿರುವ ‘ಮಹಾನಟಿ’ ಎಂಬ ರಿಯಾಲಿಟಿ ಶೋ ನಡೆಸುವ ಖಾಸಗಿ ವಾಹಿನಿ ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ–ನಟಿಯವರ ವಿರುದ್ಧ ದ್ವಿಚಕ್ರ ವಾಹನ ದುರಸ್ತಿಕಾರರ ಸಂಘ ಇತ್ತೀಚೆಗೆ ಕಲಘಟಗಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ದೂರು ನೀಡಿದರು.

ಮಹಾನಟಿ ರಿಯಾಲಿಟಿ ಶೋ ನಲ್ಲಿ ಮೆಕಾನಿಕ್ ಕೆಲಸ ಮಾಡುವರು ಕೊಚ್ಚೆ ಎಂದು ನಿಂದಿಸಲಾಗಿದೆ. ಮೆಕಾನಿಕ್ ಮನೆಯವರು ಗ್ರೀಸ್ ತಿಂದು ಬದುಕುತ್ತಾರೆ ಎಂದು ಬಿಂಬಿಸಲಾಗಿದೆ. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವೂ ಆಗಿರುವುದರಿಂದ ನಮ್ಮ ಬಗ್ಗೆ ಇಷ್ಟು ಕೊಳಕಾಗಿ ನಿಂದಿಸಿರುವುದರಿಂದ ನಾವುಗಳು ತಲೆ ಎತ್ತಿ  ಓಡಾಡದಂತಾಗಿದೆ. ಆ ಸಂದರ್ಭದಲ್ಲಿ ಇಡೀ ಒಂದು ಶ್ರಮಿಕ ವರ್ಗವನ್ನು ಕೊಚ್ಚೆ ಗುಂಡಿಯಲ್ಲಿರುವವರು ಹಾಗೂ ತಮ್ಮ ಕುಟುಂಬದವರಿಗೆ ಅನ್ನಕ್ಕೆ ಬದಲಾಗಿ ಗ್ರೀಸನ್ನು ತಿನ್ನಿಸುತ್ತಾರೆ ಎಂದು ಕೇಳುವುದು ಎಷ್ಟು ಸರಿ ಪ್ರಶ್ನಿಸಿದ್ದಾರೆ.

 ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿ ಮುಖ್ಯಸ್ಥರು, ರಮೇಶ ಅರವಿಂದ್, ನಟಿ ಪ್ರೇಮ, ನಿರ್ದೇಶಕ ತರುಣ್ ಸುಧೀರ್, ಆ್ಯಂಕರ್‌ ಅನುಶ್ರೀ, ಸ್ಪರ್ಧಿ ಗಗನಾ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದ್ವಿ ಚಕ್ರ ವಾಹನ ಮೆಕ್ಯಾನಿಕ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾಜಿ ಕಲಾಲ್, ತಾಜುದ್ದೀನ್ ಹಳ್ಳಿಕೇರಿ, ಕಾರ್ಯದರ್ಶಿ ಶಬ್ಬೀರ್ ಲೈನ್ ಮ್ಯಾನ್, ಮಹಾವೀರ ಪರವಾಪುರ್, ಸದಾನಂದ ಕಲಾಲ, ಈರಪ್ಪ ಜಾವೂರ, ಮುಸ್ತಾಕ ಹಳ್ಳಿಕೇರಿ, ಮಂಜುನಾಥ್ ಬರಗಾಮ್ಕರ್, ಸಾಧಿಕ್ ಗಂಜಿಗಟ್ಟಿ, ಫಯಾಜ್ ಜಾಗಿರ್ದಾರ್, ರಾಜು ಶೇಕಾಯಿ, ರಿಯಾಜ್ ಹಳ್ಳಿಕೇರಿ, ಸಿಕಂದರ್ ಹುಬ್ಬಳ್ಳಿ, ಇಕ್ಬಾಲ್ ಹುಬ್ಬಳ್ಳಿ, ಶಿವರಾಜ್ ಹುಂಬಿ, ಕರೀಂ ಲಾಲಖಾನ್, ಮಹೇಶ್ ರಾಚೋಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT