ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಸ್ವಾಮೀಜಿಗೆ ನುಡಿನಮನ 

Last Updated 3 ಜನವರಿ 2023, 16:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಶ್ರದ್ಧಾಂಜಲಿ ಸಭೆಗಳು ನಗರದ ವಿವಿಧೆಡೆ ಮಂಗಳವಾರ ನಡೆದವು. ಸಂಘ–ಸಂಸ್ಥೆಗಳ ಸದಸ್ಯರು, ರಾಜಕೀಯ ಮುಖಂಡರು, ಸಾರ್ವಜನಿಕರು ನುಡಿನಮನ ಸಲ್ಲಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ: ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ‘ಸಿದ್ಧೇಶ್ವರ ಸ್ವಾಮೀಜಿ ಅವರು ಪ್ರವಚನದ ಮೂಲಕ ನಿರಂತರವಾಗಿ ಜ್ಞಾನ ದಾಸೋಹ ಮಾಡಿದ ಮಹಾನ್‌ ಸಂತ. ಮಗು ಮನಸ್ಸಿನ ವ್ಯಕ್ತಿತ್ವದ ಅವರು ಸರಳತೆಗೆ ಕನ್ನಡಿಯಾಗಿದ್ದರು. 2005ರಲ್ಲಿ ಸಂಸ್ಥೆಯ ಅಮೃತ ಮಹೋತ್ಸವ ಪ್ರಾರಂಭೋತ್ಸವಕ್ಕೆ ಸ್ವಾಮೀಜಿ ಚಾಲನೆ ನೀಡಿದ್ದರು’ ಎಂದು ಸ್ಮರಿಸಿದರು.

ಕೆ.ಡಿ. ಕೊಟೇಕರ, ಬಾಳು ಮಗಜಿಕೊಂಡಿ, ಗೌತಮ ಬೇತಾಳ, ಪಾರಸಮಲ್ ಬನಸಾಲಿ, ಸಿ.ಎನ್. ಕರಿಕಟ್ಟಿ , ವಿಶ್ವನಾಥ ಬೆಣಕಲ್ಲ, ಆಶೋಕ ಭಂಡಾರಿ, ಮೋಹನ ದೇಸಾಯಿ, ಅಶೋಕ ತೋಳನವರ, ಸುಭಾಸ ಹೊಸಮನಿ, ಶಾಂತರಾಜ ಪೋಳ, ಅಶೋಕ ಲದವಾ, ಸಿ.ಜಿ. ಧಾರವಾಡಶೆಟ್ಟರ್‌ ಮಾತನಾಡಿದರು. ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ ಇದ್ದರು.

ಬಿಜೆಪಿ ಕಾರ್ಯಾಲಯ: ಇಲ್ಲಿಯ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಎರಡು ವರ್ಷಗಳ ಹಿಂದೆ ಸಿದ್ಧೇಶ್ವರ ಸ್ವಾಮೀಜಿ ಅವರು, ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ಪ್ರವಚನ ನೀಡಿ, ಬದುಕಿನ ಮೌಲ್ಯದ ಬಗ್ಗೆ ತಿಳಿಸಿಕೊಟ್ಟಿದ್ದರು. ತಮ್ಮ ಪ್ರವಚನದಿಂದಲೇ ದೇಶದಾದ್ಯಂತ ಭಕ್ತ ಸಮೂಹ ಹೊಂದಿದ್ದ ಅವರು, ಸರಳವಾಗಿ ಬದುಕಿದ್ದರು ಎಂದು ಮುಖಂಡರು ಸ್ಮರಿಸಿದರು.

ಮುಖಂಡರಾದ ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ವಸಂತ ನಾಡಜೋಶಿ, ಮಾಲತೇಶ ಶ್ಯಾಗೋಟಿ, ಚಂದ್ರಶೇಖರ ಗೋಕಾಕ, ಮುರಗೇಶ ಹೊರಡಿ, ಈರಣ್ಣ ಕಾಶಪ್ಪನವರ, ನಿಂಗರಾಜ ಮುಂದಿನಮನಿ ಇದ್ದರು.

ಚೇತನಾ ಕಾಲೇಜು: ಇಲ್ಲಿನ ಚೇತನ ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಸಿದ್ಧೇಶ್ವರ ಸ್ವಾಮೀಜಿಗೆ ನುಡಿನಮನ ಸಲ್ಲಿಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ನಾಗಯ್ಯ ಅವರು, ಸ್ವಾಮೀಜಿ ಅವರ ಪ್ರವಚನ ಮತ್ತು ಆದರ್ಶಗಳ ಕುರಿತು ಮಾತನಾಡಿದರು. ಪ್ರೊ.ಕೆ.ಎಸ್‌. ಕೌಜಲಗಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಡಾ. ವಿಶ್ವನಾಥ ಕೊರವಿ ಮಾತನಾಡಿದರು. ಡಾ. ರಮಾಕಾಂತ ಕುಲಕರ್ಣಿ, ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ್ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಎಪಿಎಂಸಿ ವ್ಯಾಪಾರಸ್ಥರ ಸಂಘ: ಅಮರಗೋಳದ ಎಪಿಎಂಸಿ ಆವರಣದಲ್ಲಿರುವ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಉಪಾಧ್ಯಕ್ಷ ಪ್ರಮೋದ ಸೋಳಂಕಿ, ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ, ಚಂದ್ರಶೇಖರ ಪೂಜಾರ, ರಾಜಣ್ಣ ಬತ್ಲಿ, ಸುರೇಶ ಹುಣಸಿಕಟ್ಟಿ, ಗುಂಡಪ್ಪ ಸಾವುಕಾರ, ಶಿವಯೋಗಿ ಹೊಸಕಟ್ಟಿ, ಶಂಭುಲಿಂಗಪ್ಪ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT