ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‌ ಆಕ್ರೋಶ

ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ನಗರದ ಪೆಟ್ರೋಲ್ ಬಂಕ್‌ ಎದುರು ಧರಣಿ
Last Updated 14 ಜೂನ್ 2021, 16:39 IST
ಅಕ್ಷರ ಗಾತ್ರ

ಧಾರವಾಡ: ತೈಲ ಬೆಲೆ ಏರಿಕೆ ಖಂಡಿಸಿ ಕಳೆದ ಮೂರು ದಿನಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ಧರಣಿ ನಡೆಸುತ್ತಿದ್ದು, ಸೋಮವಾರ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ನರೇಗಲ್‌ ಪೆಟ್ರೋಲ್‌ ಬಂಕ್‌ ಎದುರು ಪ್ರತಿಭಟನೆ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್‌.ವಿ. ದೇಶಪಾಂಡೆ ‘ಕೇವಲ ಪೆಟ್ರೋಲ್ ಅಲ್ಲದೇ ಡಿಸೇಲ್ ಬೆಲೆಯೂ ಲೀಟರ್‌ಗೆ ₹100 ತಲುಪಿದೆ. ತೈಲ ಬೆಲೆಯ ಜತೆಗೆ ಲಾಕಡೌನ್ ಸಮಯದಲ್ಲಿ ವಿದ್ಯುತ್, ನೀರು, ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಬಡ ಜನರು ಬದುಕುವುದೇ ಕಷ್ಟ ಸಾಧ್ಯವಾಗಿದೆ. ಬಡ ಜನರ ಮೇಲಿನ ಬೆಲೆ ಏರಿಕೆಯ ಬರೆ ಖಂಡಿಸಿಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಮುಖಂಡರು ಬೇರೆ ಬೇರೆ ಅರ್ಥ ಕಲ್ಪಿಸುವ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಕೂಡಲೇ ತೈಲ ಬೆಲೆ ಇಳಿಸಲು ಪ್ರಯತ್ನಿಸಿ’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಸ್ವಾತಿ ಮಾಳಗಿ, ಇಸ್ಮಾಯಿಲ್ ತಮಾಟಗಾರ, ವೀರಣ್ಣ ಮತ್ತಿಕಟ್ಟಿ, ದೇವಕಿ ಯೋಗಾನಂದ, ಆನಂದ ಸಿಂಗನಾಥ, ವಸಂತ ಅರ್ಕಾಚಾರ, ಪ್ರಶಾಂತ ಕೆಕರೆ, ಪ್ರಭಾವತಿ ವಡ್ಡಿನ, ಶಿವು ಚೆನ್ನಗೌಡ್ರ, ಸುರೇಖಾ ಪುಜಾರ, ದೇವಾನಂದ ರತ್ನಾಕರ, ಸತೀಶ ತುರಮರಿ, ಪರುಶರಾಮ ಚುರಮರಿ, ಅಷ್ಪಾಖ್ ಕೊಪ್ಪಳ, ಶಾಂತಾ ತೆಗೂರ, ಎ.ಎಂ. ಖಾದ್ರಿ, ಸಂಜಯ ತುದಿಗಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT