ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?

Last Updated 6 ಸೆಪ್ಟೆಂಬರ್ 2021, 7:33 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೆ. 3ರಂದು ನಡೆದಿದ್ದ ಚುನಾವಣೆಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮತ ಎಣಿಕೆ ಆರಂಭವಾಗಿದೆ.

82 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಎಲ್ಲಾ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ 41, ಜೆಡಿಎಸ್‌ನಿಂದ 49 ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.

* ಬಿಜೆಪಿಯ ಸಂತೋಷ‌ ಚೌಹಾಣ್ (ವಾರ್ಡ್ 41) ಮತ್ತು ಮಹದೇವಪ್ಪ ನರಗುಂದ (42) ಗೆಲುವು.

*ಬಿಜೆಪಿಯ ಸರಸ್ವತಿ (ವಾರ್ಡ್ 54) ಗೆಲುವು ಪಡೆದ ಅಭ್ಯರ್ಥಿ.

*ವಾರ್ಡ್ ಸಂಖ್ಯೆ 56ರಿಂದ ಗೆದ್ದ ಪಕ್ಷೇತರ ಅಭ್ಯರ್ಥಿ ಚಂದ್ರಿಕಾ ಮೇಸ್ತ್ರಿ. ಅವರು,ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು.

*ಕಾಂಗ್ರೆಸ್‌ಗೆ ಸೆಡ್ಡು ಹೊಡೆದ ಪಕ್ಷೇತರ ಅಭ್ಯರ್ಥಿ ಅಕ್ಷತಾ ಮೋಹನ ಅಸುಂಡಿ (ವಾರ್ಡ್ 82)2498 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಅಕ್ಷತಾ ಕಣಕ್ಕೆ ಇಳಿದಿದ್ದರು.

*21ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಶೇಖ್ ಅಜ್ಮಲ್ ಗೋಲಾ, 29ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಇಮ್ರಾನ್ ಮಹಮೂದ ಅಲಿ ಗೆಲುವು

*ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ 48 ವಾರ್ಡುಗಳ ಮತ ಎಣಿಕೆ ನಡೆದಿದೆ.ಈ ಪೈಕಿ 19 ವಾಡ್೯ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 11 ವಾರ್ಡುಗಳಲ್ಲಿ ಕಾಂಗ್ರಸ್ ಹಾಗೂ ೩ ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

*ಬಿಜೆಪಿಯ ರೂಪಾ ಶೆಟ್ಟಿಗೆ (ವಾರ್ಡ್ 47) ಗೆಲುವು

*ಧಾರವಾಡ 31ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಹರಿಜನ ಗೆಲುವು

*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ:ಪಕ್ಷೇತರ ಅಭ್ಯರ್ಥಿ ಕಿಶನ್ ಬೆಳಗಾವಿ (ವಾರ್ಡ್ 48), ಬಿಜೆಪಿಯ ಸುರೇಶ ಬೇದ್ರೆ (ವಾರ್ಡ್ 13) ಜಯಭೇರಿ‌. ಗೆಲುವಿನ ಖಾತೆ ತೆರೆದ ಪಕ್ಷೇತರ ಅಭ್ಯರ್ಥಿ.

*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಕಾಂಗ್ರೆಸ್‌ನ ಶಂಕರಪ್ಪ ಹರಿಜನ (ವಾರ್ಡ್ 31)ಹಾಗೂ ಬಿಜೆಪಿಯನೀಲವ್ವ ಯಲ್ಲಪ್ಪ ಹರಿವಾಳದ (ವಾರ್ಡ್ 26)ಗೆಲುವು ಸಾಧಿಸಿದ್ದಾರೆ.

*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ವಾರ್ಡ್ ಸಂಖ್ಯೆ 18: ಬಿಜೆಪಿಯ ಶಿವು ಹಿರೇಮಠ ಗೆಲುವು.

*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಬಿಜೆಪಿಯ ಸುನಿತಾ ಮಾಳವದಕರ (ವಾರ್ಡ್: 27) ಗೆಲುವು.

*ಬಿಜೆಪಿಯ ರಾಜಣ್ಣ ಕೊರವಿ (ವಾರ್ಡ್ 36), ಕಾಂಗ್ರೆಸ್ ನ ಪಮೀದಾ ಕಾರಡಗಿ (ವಾರ್ಡ್: 79), ಕಾಂಗ್ರೆಸ್‌ನ ಮಹಮ್ಮದ್ ‌ಇಸ್ಮಾಯಿಲ್ ಭದ್ರಾಪುರ (ವಾರ್ಡ್53)ಗೆಲುವು

*ಧಾರವಾಡದ ವಾರ್ಡ್ ಸಂಖ್ಯೆ 18ರ ಬಿಜೆಪಿ ಅಭ್ಯರ್ಥಿ ಶಿವು ಹಿರೇಮಠ ಗೆಲುವು. 3ನೇ ಬಾರಿ ಅವಧಿಗೆ ಗೆಲುವು.

* ವಾರ್ಡ್ 79ರ ಕಾಂಗ್ರೆಸ್ ಅಭ್ಯರ್ಥಿ ಫಾಮಿಡಾ ಕಾರಡಗಿ ಗೆಲುವು

*ವಾರ್ಡ್ 26ರ ಬಿಜೆಪಿ ಅಭ್ಯರ್ಥಿ ನಿಲವ್ವ ಅರವಾಳದ ಗೆಲುವು

*ವಾರ್ಡ್ 27ರ ಬಿಜೆಪಿಯ ಸುನಿತಾ ಮಾಳವಾದಕರ್ ಗೆಲುವು

* ವಾರ್ಡ್ 28ರಲ್ಲಿ ಸ್ಪರ್ದಿಸಿದ್ದ ಮಾಜಿ ಉಪಮೇಯರ್ ಚಂದ್ರಶೇಖರ ಮನಗುಂಡಿ ಗೆಲುವು

* ಕಾಂಗ್ರೆಸ್‌ನ ನಿರಂಜನಯ್ಯ ಹಿರೇಮಠ (ವಾರ್ಡ್ 68) ಗೆಲುವು. 1522 ಮತಗಳಿಂದ ಜಯ. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಭು ನವಲಗುಂದ ಮಠ ವಿರುದ್ಧ ಜಯ ಸಾಧಿಸಿದ ನಿರಂಜನಯ್ಯ.ಗೆಲುವು ಸಂತೋಷ ತಂದಿದೆ. ಇದು‌‌ ನನ್ನ ಗೆಲುವಲ್ಲ. ಶಾಸಕ ಪ್ರಸಾದ ‌ಅಬ್ಬಯ್ಯ ಅವರ ಗೆಲುವು.

*ವಾರ್ಡ್ 49ರ ಬಿಜೆಪಿಯ ವೀಣಾ ಚೇತನ ಬರದ್ವಾಡ ಗೆಲುವು.

* ವಾರ್ಡ್ 73ರ ಬಿಜೆಪಿ ಅಭ್ಯರ್ಥಿ ಶೀಲಾ ಕಾಟ್ಕರ್ ಗೆ ಜಯ

* ವಾರ್ಡ್ ಸಂಖ್ಯೆ 57: ಬಿಜೆಪಿಯ ಮೀನಾಕ್ಷಿ ವಂಟಮುರಿ

* ವಾರ್ಡ್ 62 ಕಾಂಗ್ರೆಸ್ ಸರ್ತಾಜ ಶರೀಫ್

* ವಾರ್ಡ್ 63: ಕಾಂಗ್ರೆಸ್ ಮಹಮ್ಮದ್ ಇಲಿಯಾಸ್

* ವಾರ್ಡ್ 64: ಬಿಜೆಪಿಯ ಪೂಜಾ ಶೇಜವಾಡಕರ

* ವಾರ್ಡ್ 33: ಕಾಂಗ್ರೆಸ್ ನ ಇಮ್ರಾನ ಯಲಿಗಾರ.

* ವಾರ್ಡ್ 73:ಬಿಜೆಪಿ ಶೀಲಾ ಕಾಟಕರ್ ಗೆಲುವು ಪಡೆದಿದ್ದಾರೆ.

*ವಾರ್ಡ್ 48: ಕಾಂಗ್ರೆಸ್ ಅಭ್ಯರ್ಥಿ ನಿರಂಜನ ಹಿರೇಮಠ ಗೆಲವು.

* ಬಿಜೆಪಿಯ ಶಾಂತಾ ಹಿರೇಮಠ ಅವರಿಗೆ 700 ಮತಗಳ ಅಂತರದ ಗೆಲುವು.

*ಹುಬ್ಬಳ್ಳಿ ಧಾರವಾಡ ಮಹಾನಗರ ‌ಪಾಲಿಕೆ: ಬಿಜೆಪಿಯ ಸತೀಶ ಹಾನಗಲ್ (ವಾರ್ಡ್ 32) ಗೆಲುವು.

*ಹು-ಧಾ ಪಾಲಿಕೆ ವಾರ್ಡ್ 69 ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಗೆಲುವು

*ಹು-ಧಾ ಪಾಲಿಕೆ ವಾರ್ಡ್ 52ರಲ್ಲಿ ಪಕ್ಷೇತರ ಅಭ್ಯರ್ಥಿ ಚೇತನ್ ಹಿರೇಕೆರೂರ್ ಗೆಲುವು

*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ:ಕಾಂಗ್ರೆಸ್ ಅಭ್ಯರ್ಥಿ ಸುವರ್ಣಾ ಕಲ್ಲಕುಂಟ್ಲಾ ವಾರ್ಡ್ 59, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಾರ್ಡ್ 52ರ ಅಭ್ಯರ್ಥಿ ಚೇತನ ಹಿರೇಕೆರೂರ ಹಾಗೂ ವಾರ್ಡ್ 23ರ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ‌ಬಡಕುರಿ ಜಯಭೇರಿ.

* ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ:ಇಮ್ರಾನ್ ಯಲಿಗಾರ (ವಾರ್ಡ್ 33) ಗೆಲುವು.

*ಕಾಂಗ್ರೆಸ್‌ನ ಶ್ರುತಿ ಚಲವಾದಿ (ವಾರ್ಡ್: 58) ಗೆಲುವು. ಬಿಜೆಪಿ ಅಭ್ಯರ್ಥಿ ಮಹೇಂದ್ರ ಕೌತಾಳ ಸೋಲು. ಈ ವಾರ್ಡ್ ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು.

*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ:ಬಿಜೆಪಿ 20, ಕಾಂಗ್ರೆಸ್ 15, ಪಕ್ಷೇತರ ಮೂವರು ಅಭ್ಯರ್ಥಿಗಳಿಗೆ ಗೆಲುವು.

*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ:ಬಿಜೆಪಿಯ ಶಂಕರ ಶಳಕೆ (ವಾರ್ಡ್ 8), ಕಾಂಗ್ರೆಸ್ ನ ಬಾನು ಮುಲ್ಲಾ (ವಾರ್ಡ್ 22) ಜಯಭೇರಿ.

*ವಾರ್ಡ್ 74: ಕಾಂಗ್ರೆಸ್‌ನ ಬೀಬಿ ಮರಿಯಮ್ ಮುಲ್ಲಾ ಗೆಲುವು

*ಬಿಜೆಪಿಯ ತಿಪ್ಪಣ್ಣ ಮಜ್ಜಗಿ (ವಾರ್ಡ್: 38) 3103 ಮತ್ತು ರಾಜಣ್ಣ ಕೊರವಿ (ವಾರ್ಡ್ 36). 3400 ಮತಗಳ ಅಂತರದಿಂದ ಜಯಭೇರಿ.2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಪಾಲಿಕೆ ಸದಸ್ಯರಾಗಿದ್ದ ರಾಜಣ್ಣ‌ ಕೊರವಿ‌‌ ಮೊದಲ ಬಾರಿಗೆ ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

* ಬಿಜೆಪಿಯ ವೀಣಾ ಭಾರದ್ವಾಡ್ (ವಾರ್ಡ್ 49) ಗೆಲುವು.

*ಬಿಜೆಪಿಯ ಚಂದ್ರಶೇಖರ ಮಲ್ಲಪ್ಪ ಮನಗುಂಡಿ (ವಾರ್ಡ್ 28) ಗೆಲುವು.

*ಬಿಜೆಪಿಯ ವೀರಣ್ಣ ಸವಡಿ (ವಾರ್ಡ್46) ಉಮಾ ಮುಕುಂದ (ವಾರ್ಡ್ 44) ಜಯಭೇರಿ.

*ಬಿಜೆಪಿಯ ಸೀಮಾ ಮೊಗಲಿ ಶೆಟ್ಟರ್ (ವಾರ್ಡ್ 39) ಜಯ ಪಡೆದಿದ್ದಾರೆ. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ರತ್ನಾ ಪಾಟೀಲ, ಆಮ್ ಆದ್ಮಿ ಪಕ್ಷದಿಂದ ರೋಹಿಣಿ ಸೋಮನಕಟ್ಟಿ ಸ್ಪರ್ಧಿಸಿದ್ದರು.

*ಕಾಂಗ್ರೆಸ್‌ನ ಪ್ರಕಾಶ ಕುರಹಟ್ಟಿ (ವಾರ್ಡ್ 45) ಗೆಲುವು. ಈ ವಾರ್ಡ್‌ನಲ್ಲಿ ಬಿಜೆಪಿಯ ಮಣಿಕಂಠ ಶ್ಯಾಗೋಟಿ, ಮಾರುತಿ ಬೀಳಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

*ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಭೀ. ಗುಂಡೂರ (ವಾರ್ಡ್ 35) ಜಯಭೇರಿ. 939 ಮತಗಳ ಅಂತರದ ಗೆಲುವು ಕಂಡಿರುವ ಅವರುಹಿಂದಿನ ಎರಡೂ ಚುನಾವಣೆಗಳಲ್ಲಿ ಸೋಲು ಕಂಡಿದ್ದರು.

*ವಾರ್ಡ್ 49 ರಲ್ಲಿ ಬಿಜೆಪಿ ಅಭ್ಯರ್ಥಿ ವೀಣಾ ಚೇತನ ಬರದ್ವಾಡ 3576 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಮಡಿವಾಳರ 598 ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಮೆಹರವಾಡೆ 519 ಮತಗಳನ್ನು ಪಡೆದಿದ್ದಾರೆ. 120 ನೋಟಾ ಮತಗಳು ಸೇರಿ 4813 ಮತಗಳು ಚಲಾವಣೆಯಾಗಿವೆ. ಒಂದು ಮತ ತಿರಸ್ಕೃತವಾಗಿದೆ.

ಜಯದ ಖಾತೆ ತೆರೆದ ಎಐಎಂಎಂಐಎಂ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಎಂಐಎಂ ಗೆಲುವಿನ ಖಾತೆ ತೆರೆದಿದೆ. 71ನೇ ವಾರ್ಡ್‌ನಿಂದಸ್ಪರ್ಧಿಸಿದ್ದ ನಜೀರ ಅಹ್ಮದ್ ಹೊನ್ಯಾಳ ಜಯ ಸಾಧಿಸಿದ್ದಾರೆ.

*ಬಿಜೆಪಿಯ ಜ್ಯೋತಿ ‌ಪಾಟೀಲ (ವಾರ್ಡ್ 19) ಹಾಗೂ ರಾಧಾಬಾಯಿ ನಂದಗೋಪಾಲ ಸಪಾರೆ (ವಾರ್ಡ್ 60) ಜಯ ಸಾಧಿಸಿದ್ದಾರೆ.

*ಬಿಜೆಪಿಯ ಡಾ. ಪಾಂಡುರಂಗ ಪಾಟೀಲ, ಕಾಂಗ್ರೆಸ್‌ನ ಪ್ರಕಾಶ ಕ್ಯಾರಕಟ್ಟಿ, ಜೆಡಿಎಸ್‌ನ ಅಲ್ತಾಫ್ ಕಿತ್ತೂರ, ಕಾಂಗ್ರೆಸ್‌ನ ದೀಪಕ್ ಚಿಂಚೋರೆ ಪುತ್ರ ಅನಿರುದ್ಧಗೆ ಸೋಲು

ಎಐಎಂಐಎಂ​ ಮತ್ತೊಬ್ಬ ಅಭ್ಯರ್ಥಿಗೆ ಜಯ
76ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಎಐಎಂಐಎಂ ಪಕ್ಷದ ವಹೀದಾಖಾನಂ ಅಲ್ಲಾಭಕ್ಷ ಕಿತ್ತೂರ ಜಯಭೇರಿ ಮೊಳಗಿಸಿದ್ದಾರೆ.

ಕೊನೆಗೂ ಜಯದ ಖಾತೆ ತೆರೆದ ಜೆಡಿಎಸ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ‌ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ಖಾತೆ ತೆರೆದಿದೆ. ಈ ಪಕ್ಷದ ಲಕ್ಷ್ಮಿ ಹಿಂಡಸಗೇರಿ 25ನೇ ವಾರ್ಡ್‌ನಲ್ಲಿಜಯ ಗಳಿಸಿದ್ದಾರೆ.

*51ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂದಿಲ್ ಕುಮಾರ ಎಸ್. 1251ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೃಷ್ಣಾಗಂಡಗಾಳೇಕರ 1243, ಜೆಡಿಎಸ್ ಅಭ್ಯರ್ಥಿ ರಾಜು ನಾಯಕವಾಡಿ 64, ಎಎಪಿ ಅಭ್ಯರ್ಥಿ ನಂದಾ ಪಲವಾಡಿ 55, ಬಿಎಸ್‌ಪಿ ಅಭ್ಯರ್ಥಿ ರಸೂಲಸಾಬ ಯಲಿಗಾರ 194 ಹಾಗೂಪಕ್ಷೇತರ ಅಭ್ಯರ್ಥಿ ಸಂತೋಷ ಸಂಪಗಾವಿ 812 ಮತಗಳನ್ನು ಪಡೆದಿದ್ದಾರೆ. ನೋಟಾ 50 ಮತಗಳುಸೇರಿ ಒಟ್ಟು 3669 ಮತಗಳು ಚಲಾವಣೆಯಾಗಿವೆ.

ಎಐಎಂಐಎಂ ಮತ್ತೊಬ್ಬ ಅಭ್ಯರ್ಥಿಗೆ ಜಯ
ಎಐಎಂಐಎಂ ಪಕ್ಷದ ಮೂರನೇ ಅಭ್ಯರ್ಥಿ ಜಯ ಸಾಧಿಸಿದ್ದಾರೆ. 77 ವಾರ್ಡ್‌ನಿಂದಸ್ಪರ್ಧಿಸಿದ್ದ ಹುಸೇನ ಬಿ. ನಾಲ್ವಥವಾಡ ಜಯ ಪಡೆದಿದ್ದಾರೆ. ಈ ಪಕ್ಷದ‌ ಒಟ್ಟು ಮೂವರು ಅಭ್ಯರ್ಥಿಗಳು ಜಯ ಸಾಧಿಸಿದಂತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT