ಶುಕ್ರವಾರ, ನವೆಂಬರ್ 22, 2019
20 °C

ಹುಬ್ಬಳ್ಳಿ ‌| ಚಾಕು ಇರಿತ: ಒಬ್ಬ ಸಾವು

Published:
Updated:
Prajavani

ಹುಬ್ಬಳ್ಳಿ: ಮೊನ್ನೆ ಮೊನ್ನೆ ನಡೆದ ಮೂರ್ನಾಲ್ಕು ಚಾಕು ಇರಿತ ಪ್ರಕರಣ ಮಾಸುವ ಮೊದಲೇ, ಮಂಗಳವಾರ ಹಾಡಹಗಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ.

ಹಳೇ ಹುಬ್ಬಳ್ಳಿಯ ಆಸಾರ ಓಣಿಯಲ್ಲಿ ಶಿವಶಂಕರ ಕಾಲೊನಿ ನಿವಾಸಿ ನಿತುನ್ ಶೆಟ್ವಾ(23) ಅವರನ್ನು ಕೊಲೆ ಮಾಡಲಾಗಿದೆ.

ನಿತುನ್ ಸ್ನೇಹಿತ ರಾಹುಲ್ ಹಾಗೂ ಅವನ ಸ್ನೇಹಿತರು ಚಾಕು ಇರಿದು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಕಿಮ್ಸ್ ಶವಾಗಾರದ ಎದುರು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)