ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ಪಡೆಯಲು ನೂಕುನುಗ್ಗಲು

ಕೊರೊನಾ ಲೆಕ್ಕಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದ ಜನ
Last Updated 6 ಏಪ್ರಿಲ್ 2020, 13:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರು, ತಮ್ಮ ಮನೆ ಬಳಿ ಸೋಮವಾರ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮ ನೂಕುನುಗ್ಗಲಿಗೆ ಸಾಕ್ಷಿಯಾಯಿತು.

ಬೆಳಿಗ್ಗೆ11.30ಕ್ಕೆ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಾರೆಂಬ ವಿಷಯ ತಿಳಿದ ಜನರು .....ಅವರ ಮನೆ ಎದುರು ನೂರಾರು ಮಂದಿ ಸಾಲಾಗಿ ನಿಂತಿದ್ದರು. ಕೊರೊನಾ ಭೀತಿ ಇದ್ದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆಹಾರಕ್ಕಾಗಿ ಮಕ್ಕಳೊಂದಿಗೆ ರಸ್ತೆಯಲ್ಲೇ ಕಾಯುತ್ತಿದ್ದರು.

ನಂತರ ಅನಿಲಕುಮಾರ ಪಾಟೀಲ ಹಾಗೂ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಅವರು ಅಕ್ಕಿ, ಬೇಳೆ, ಸೋಪು ಮುಂತಾದ ಆಹಾರ ಧಾನ್ಯವನ್ನೊಳಗೊಂಡ ಚೀಲ ಹಾಗೂ ಕಲ್ಲಂಗಡಿ ಹಣ್ಣು ವಿತರಿಸಿದರು.

ಮನೆಯೊಳಗಷ್ಟೇ ಅಂತರ:

ಮನೆಯೊಳಕ್ಕೆ ಸರದಿಯಲ್ಲಿ ಬರುತ್ತಿದ್ದವರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡೇ ಆಹಾರ ಧಾನ್ಯ ಪಡೆದುಕೊಂಡರು. ಆದರೆ, ಹೊರಗಡೆ ನಾ ಮುಂದು, ತಾ ಮುಂದು ಎಂದು ಜನ ಜಮಾಯಿಸಿದ್ದರು.

ಲಾಕ್‌ಡೌನ್‌ನಿಂದ ತೀರಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಅನಿಲಕುಮಾರ ಪಾಟೀಲ ಅವರಿಗೆ ಜನ, ‘ಬಡವರ ಬಂಧು’ ಎಂದು ಜೈಕಾರ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಆಹಾರದ ಧಾನ್ಯದ ಚೀಲದ ಮೇಲೆ ಅನಿಲಕುಮಾರ ಪಾಟೀಲ ಹಾಗೂ ಇತರ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ಎದ್ದು ಕಾಣುತ್ತಿದ್ದವು.

‘ಹದಿಮೂರು ದಿನದಿಂದ ಕೆಲಸವಿಲ್ಲದೆ ಮನೆಯವರೆಲ್ಲರೂ ತತ್ತರಿಸಿದ್ದೇವೆ. ಊಟಕ್ಕೂ ಗತಿ ಇಲ್ಲದೆ ಗೋಳಾಡುತ್ತಿದ್ದೇವೆ. ದಾನಿಗಳು ನೀಡುವ ಊಟ ಹಾಗೂ ಆಹಾರ ಧಾನ್ಯವನ್ನೇ ನೆಚ್ಚಿಕೊಂಡು ದಿನ ದೂಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮಗೆ ಒಂದಿಷ್ಟು ಆಹಾರ ಪದಾರ್ಥ ನೀಡಿರುವ ಪಾಟೀಲರ ಉಪಕಾರವನ್ನು ಎಂದಿಗೂ ಮರೆಯವುದಿಲ್ಲ’ ಎಂದು ಅರವಿಂದ ನಗರದ ಕೂಲಿ ಕಾರ್ಮಿಕ ಶಂಕರಪ್ಪ ಹೇಳಿದರು.

ಮಂಜುನಾಥ ಅಜಗೊಂಡ, ವೆಂಕಟೇಶ ಪೂಜಾರ, ಜಾಕೀರ್ ಸನದಿ ಹಾಗೂ ನಿಜಂ ಮನಿಯಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT