ಧಾರವಾಡ: ‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಎರಡು ದಿನ ಹಿಂದೆ ಅಪರಿಚಿತರು ಪ್ರತಿಷ್ಠಾಪಿಸಿದ ಅಯ್ಯಪ್ಪಸ್ವಾಮಿ ಮೂರ್ತಿ ಆರಾಧಿಸಲು, ದೇವಸ್ಥಾನ ನಿರ್ಮಿಸಲು ಕೃಷಿ ವಿ.ವಿ, ಸರ್ಕಾರ ವಿರೋಧಿಸಿದರೆ ಪ್ರತಿಭಟಿಸುತ್ತೇವೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಯ್ಯಪ್ಪ ಸ್ವಾಮಿ ಮತ್ತು ಸುಬ್ರಮಣ್ಯ ಮೂರ್ತಿಯನ್ನು ಅಲ್ಲಿ ಯಾರು ಪ್ರತಿಷ್ಠಾಪಿಸಿದ್ದಾರೆ ಎಂಬುದು ಗೊತ್ತಿಲ್ಲ. ಶಾಸ್ತ್ರೋಕ್ತ ರೀತಿಯಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೊಂದು ಚಮತ್ಕಾರದಂತಿದೆ. ಮೂರ್ತಿ ಆರಾಧನೆಗೆ ಯಾರೂ ಅಡ್ಡಿ ಮಾಡಬಾರದು’ ಎಂದರು.

‘ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಇರುವ ಸ್ಥಳಕ್ಕೆ ಧಾರವಾಡದ ಅಯ್ಯಪ್ಪ ಸ್ವಾಮಿ ಮಂಡಳಿಯವರು, ಸ್ವಾಮಿಗಳನ್ನು ಕರೆಸಿ ಇಲ್ಲಿಯೇ ಅನ್ನದಾನ, ಪೂಜೆ ಮಾಡುವ ಯೋಚನೆ ಇದೆ’ ಎಂದು ತಿಳಿಸಿದರು.

‘ಕೃಷಿ ವಿ.ವಿ ಜಾಗದಲ್ಲಿ ಮಸೀದಿ ಮತ್ತು ಗೋರಿಗಳು ಇವೆ. ಮೂರ್ತಿ ತೆರವುಗೊಳಿಸುವುದಾದರೆ ಮಸೀದಿ, ಗೋರಿಗಳನ್ನು ತೆರವುಗೊಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.