ಧಾರವಾಡ: ‘ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಫೆ.19 ರಂದು ಛತ್ರಪತಿ ಶಿವಾಜಿ ಜಯಂತ್ಯುತ್ಸವ ನಡೆಯಲಿದೆ’ ಎಂದು ಮಂಡಳದ ಗೌರವ ಕಾರ್ಯದರ್ಶಿ ರಾಜು ಬಿರಜೆನವರ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಯಂತ್ಯುತ್ಸವ ಪ್ರಯುಕ್ತ 18 ರಂದು ಬೆಳಿಗ್ಗೆ 9ಕ್ಕೆ ರಕ್ತದಾನ ಶಿಬಿರ, ಮಧ್ಯಾಹ್ನ 4ಕ್ಕೆ ರಂಗೋಲಿ ಸ್ಪರ್ಧೆ ನಡೆಯಲಿದೆ’ ಎಂದರು.

‘19 ರಂದು ಬೆಳಿಗ್ಗೆ 8.30ಕ್ಕೆ ಮಂಡಳದ ಅಧ್ಯಕ್ಷ ಮನೋಹರ ಮೋರೆ ಅವರು ಧ್ವಜಾರೋಹಣ ನೆರವೇರಿಸುವರು. 9.30ಕ್ಕೆ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಮಯೂರ ಮೋರೆ, ಶಂಕರ ಶೇಳಕೆ, ಪ್ರಕಾಶ ಘಾಟಗೆ, ಪೊಲೀಸ್ ಅಧಿಕಾರಿ ಮಹದೇವಪ್ಪ ಯಾದವಾಡ ಪಾಲ್ಗೊಳ್ಳುವರು’ ಎಂದರು.

‘10 ಗಂಟೆಗೆ ಬಾಲ ಶಿವಾಜಿ ಅವರ ತೊಟ್ಟಿಲೋತ್ಸವ ಹಾಗೂ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 11 ಗಂಟೆಗೆ ಶಿವಾಜಿ ಜಯಂತ್ಯುತ್ಸವ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟನೆ ನೆರವೇರಿಸುವರು’ ಎಂದು ತಿಳಿಸಿದರು.

‘ಮಧ್ಯಾಹ್ನ 3ಕ್ಕೆ ಮೆರವಣಿಗೆಗೆ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಪಾಲ್ಗೊಳ್ಳುವರು’ ಎಂದರು.

ಮಂಡಳದ ಕಾರ್ಯಾಧ್ಯಕ್ಷ ಸುನೀಲ ಮೋರೆ, ನಿರ್ದೇಶಕರಾದ ಸುಭಾಸ ಶಿಂಧೆ, ರಾಜು ಕಾಳೆ, ಶಿವಾಜಿ ಸೂರ್ಯವಂಶಿ, ಮಲ್ಲೇಶಪ್ಪ ಶಿಂಧೆ ಸುದ್ದಿಗೋಷ್ಠಿಯಲ್ಲಿದ್ದರು.

ಬೈಕ್ ರ್ಯಾಲಿ

ಶಿವಾಜಿ ಜಯಂತ್ಯುತ್ಸವದ ಪ್ರಯುಕ್ತ ಫೆ. 18 ರಂದು ಮಧ್ಯಾಹ್ನ 4 ಗಂಟೆಗೆ ಮರಾಠಾ ವಿದ್ಯಾಪ್ರಸಾರ ಮಂಡಳದಿಂದ ಬೈಕ್ ರ್ಯಾಲಿ ನಡೆಯಲಿದೆ. ರ್ಯಾಲಿಯು ಗಾಂಧೀ ಚೌಕ ಕೋರ್ಟ್ ವೃತ್ತ ಜುಬಿಲಿ ವೃತ್ತ ಮಾರ್ಗವಾಗಿ ಸಾಗಿ ಮಂಡಳದ ಆವರಣಕ್ಕೆ ಮರಳಿ ಸಂಪನ್ನವಾಗಲಿದೆ ಎಂದು ಮಂಡಳದ ಅಧ್ಯಕ್ಷ ಮನೋಹರ ಮೋರೆ ತಿಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.