ಕುಂದಗೋಳ(ಧಾರವಾಡ): ಪಟ್ಟಣದ ಬಸ್ ನಿಲ್ದಾಣ ಬಳಿಯ ಟಿಎಪಿಎಂಎಸ್ ಸೂಸೈಟಿ ಮೈದಾನದಲ್ಲಿ ಬುಧವಾರ ನಿಂಗರಾಜ ಮಲ್ಲಿಕಾರ್ಜುನ ಅವಾರಿ (16) ಕುತ್ತಿಗೆ, ಸೊಂಟಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ನಿಂಗರಾಜ ಅವರು ಹರ್ಬರ್ಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ಗೆ ಒಯ್ಯಲಾಗಿದೆ.

‘ಮಧ್ಯಾಹ್ನ 4.30ರ ಹೊತ್ತಿನಲ್ಲಿ ಕೃತ್ಯ ನಡೆದಿದೆ. ಕೃತ್ಯ ಎಸಗಿರುವವರು ಯಾರು ಮತ್ತು ಯಾಕೆ ಎಂಬುದು ಗೊತ್ತಾಗಿಲ್ಲ. ಸಿ.ಸಿ ಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತೇವೆ. ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ’ಪ್ರಜಾವಾಣಿ’ಗೆ ತಿಳಿಸಿದರು.

ಡಿವೈಎಸ್ಪಿ ವಿನೋದ ಮುಕ್ತಿದಾರ, ಪೊಲೀಸ್ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ, ಪಿಎಸ್ಐ ಇಮ್ರಾನ್ ಪಠಾಣ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.