ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ: ವಿದ್ಯುತ್ ಕಂಭಕ್ಕೆ ತಾಡಪತ್ರಿ, ಜಾನುವಾರು ಕಟ್ಟದಂತೆ ಸೂಚನೆ

Published 11 ಜುಲೈ 2024, 15:30 IST
Last Updated 11 ಜುಲೈ 2024, 15:30 IST
ಅಕ್ಷರ ಗಾತ್ರ

ನವಲಗುಂದ: ಪಟ್ಟಣದಲ್ಲಿರುವ ವಿದ್ಯುತ್ ಕಂಬಗಳಿಗೆ ತಾಡಪಾಲು ಕಟ್ಟುತ್ತಿರುವುದು ಕಂಡುಬಂದಿರುತ್ತದೆ. ವಿಶೇಷವಾಗಿ ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ, ಎಗ್ ರೈಸ್ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು ಈ ರೀತಿ ಮಾಡುತ್ತಿದ್ದು, ವಿದ್ಯುತ್‌ ಅಪಘಢ ಸಂಭವಿಸಿದರೆ ಅದಕ್ಕೆ ಜೆಸ್ಕಾಂ ಹೊಣೆ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ವ್ಯಾಪಾರಸ್ಥರು ಹಾಗೂ ಗ್ಯಾರೇಜ್‌ನವರು ವಿದ್ಯುತ್ ಕಂಬಗಳಿಗೆ ಯಾವುದೇ ರೀತಿಯ ವಸ್ತುಗಳನ್ನು ಕಟ್ಟಬಾರದು. ಹೆಸ್ಕಾಂ ಸಿಬ್ಬಂದಿ ಈ ಕುರಿತು ಸಾಕಷ್ಟು ಎಚ್ಚರಿಕೆ ನೀಡಿದರೂ  ಕಟ್ಟುವದನ್ನು ನಿಲ್ಲಿಸುತ್ತಿಲ್ಲ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಅವಘಡ ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ದಾರಿಯಾಗುವುದಿಲ್ಲ ಎಂದು ಹೆಸ್ಕಾಂ ಶಹರ ಶಾಖಾಧಿಕಾರಿ ಹನುಮರಡ್ಡಿ ರೊಗಿ ಸೂಚನೆ ನೀಡಿದ್ದಾರೆ.

ಮಳೆಗಾಲವಿರುವುದರಿಂದ ವಿದ್ಯುತ್‌ ಪ್ರವಹಿಸುವ ಆತಂಕ ಇರುತ್ತದೆ. ತಾಡಪಾಲ್‌ ಸೇರಿದಂತೆ ಜಾನುವಾರುಗಳನ್ನು ಕೂಡಾ ಕಟ್ಟಬಾರದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT