ಧಾರವಾಡ: ಮನುಷ್ಯನ ಮನ ಪರಿವರ್ತನೆ ಮಾಡುವಲ್ಲಿ ನಾಟಕಗಳು ಪರಿಣಾಮಕಾರಿ ಎಂದು ಹಿರೇಮಠದ ಬಸವರಾಜ ದೇವರು ಹೇಳಿದರು.

ರಂಗಾಯಣ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಪ್ರಿಜನ್ ಮಿನಿಸ್ಟರಿ ವತಿಯಿಂದ ಕೇಂದ್ರ ಕಾರಾಗೃಹದಲ್ಲಿ ಈಚೆಗೆ ನಡೆದ ರಂಗನಾಟಕ ಶಿಬಿರದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ನಾಟಕವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವನದಲ್ಲಿ ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕಾರಾಗೃಹದ ನಿವಾಸಿಗಳು ನಾಟಕವನ್ನು ಮನರಂಜನೆಗಾಗಿ ಕಲಿಯದೇ ಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು ಎಂದರು.

ತಪ್ಪನ್ನು ತಿದ್ದಿಕೊಂಡು ಮುಂದಿನ ಜೀವನದಲ್ಲಿ ಉತ್ತಮ ನಾಗರಿಕರಾಗಿರುವುದು ಅವಶ್ಯ ಎಂದು ತಿಳಿಸಿದರು.

ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, ಜಗತ್ತು ಒಂದು ನಾಟಕರಂಗ. ನಾವೆಲ್ಲರೂ ಪಾತ್ರಧಾರಿಗಳು. ನಮ್ಮ ಪಾತ್ರಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದರು.

ಇಸ್ಲಾಂ-ಈ-ಜಮಾತ್ ಟ್ರಸ್ಟ್ನ ಅತೀಕ್ ಅಹಮದ್ ಸಂಗ್ರಸಕೊಪ್ಪ, ಫಾದರ್ ಜೊ.ರೋಡ್ರಿಗ್ಸ್, ಕಾರಾಗೃಹದ ವರಿಷ್ಠಾಧಿಕಾರಿ ನಿರ್ಮಲ ಬಿ.ಆರ್, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಸ್ಯಾಲಿ ಡಿಸೋಜಾ, ದಿವ್ಯಾ ಡಿಸೋಜಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.