ಎಜ್ಯುಕೇಷನ್ ಬಜಾರ್‌ಗಳಾಗುತ್ತಿರುವ ಶಿಕ್ಷಣ ಸಂಸ್ಥೆಗಳು

7
ಡಾ. ಡಿ.ಸಿ.ಪಾವಟೆ ಮೂಲತತ್ವ ಸ್ಮಾರಕ ಉಪನ್ಯಾಸದಲ್ಲಿ ಪ್ರೊ. ಜಿಂದ್ಯಾಲಾ ಬಿ.ಜಿ. ತಿಲಕ್ ಅಭಿಪ್ರಾಯ

ಎಜ್ಯುಕೇಷನ್ ಬಜಾರ್‌ಗಳಾಗುತ್ತಿರುವ ಶಿಕ್ಷಣ ಸಂಸ್ಥೆಗಳು

Published:
Updated:
Deccan Herald

ಧಾರವಾಡ: ‘ಇಂದಿನ ಶಿಕ್ಷಣ ವ್ಯವಸ್ಥೆ ವಾಣಿಜ್ಯೀಕರಣಗೊಳ್ಳುತ್ತಿದ್ದು, ಶಿಕ್ಷಣ ಸಂಸ್ಥೆಗಳು ‘ಎಜ್ಯುಕೇಷನ್ ಬಜಾರ್‌’ಗಳಾಗಿ ಮಾರ್ಪಟ್ಟಿವೆ. ಇಂಥ ಸಂದರ್ಭದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಪ್ರಕಗತಿಗಾಗಿ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವುದು ಇಂದಿನ ಅಗತ್ಯವಾಗಿದೆ’ ಎಂದು ದೆಹಲಿಯ ನ್ಯೂಪಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಜಿಂದ್ಯಾಲಾ ಬಿ.ಜಿ.ತಿಲಕ್ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಣ ತಜ್ಞರ ದಿನಾಚರಣೆ ಅಂಗವಾಗಿ ‘ಭಾರತದಲ್ಲಿ ಉನ್ನತ ಶಿಕ್ಷಣ ಸುಧಾರಣೆಯಲ್ಲಿನ ಸಂದಿಗ್ಧತೆಗಳು’ ಎಂಬ ವಿಷಯ ಕುರಿತು ಡಾ. ಡಿ.ಸಿ.ಪಾವಟೆ ಮೂಲತತ್ವ ಸ್ಮಾರಕ ಉಪನ್ಯಾಸ ನೀಡಿದರು.

‘ಭಾರತದಲ್ಲಿನ ಉನ್ನತ ಶಿಕ್ಷಣದಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದು. ದೇಶದಲ್ಲಿ ₹500 ದಶಲಕ್ಷ ಅರ್ಥವ್ಯವಸ್ಥೆಯಲ್ಲಿ ಶಿಕ್ಷಣ ವ್ಯವಸ್ಥೆಯ ಕೊಡುಗೆ ಅಪಾರವಾದದ್ದು. 900 ವಿಶ್ವವಿದ್ಯಾಲಯಗಳು 42ಸಾವಿರಕ್ಕೂ ಅಧಿಕ ಕಾಲೇಜುಗಳು ಇಲ್ಲಿವೆ. ಅತ್ಯಧಿಕ ವಿದ್ಯಾರ್ಥಿ ಸಮೂಹ ನಮ್ಮ ದೇಶದಲ್ಲಿದೆ. ಹೀಗಿದ್ದರೂ ಇಲ್ಲಿನ ಉನ್ನತ ಶಿಕ್ಷಣ ವ್ಯವಸ್ಥೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದರು.

‘ಬೇರೆ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದಲ್ಲಿ ಭಾರತದಲ್ಲಿ ಶೇ 40ರಷ್ಟು ‘ಗ್ರಾಸ್ ಎನ್ರೋಲ್‌ಮೆಂಟ್‌ ಸೂಚ್ಯಕ’ ಮಾತ್ರ ಹೊಂದಿದೆ. ಆದರೆ ಮುಂದುವರಿದ ರಾಷ್ಟ್ರಗಳಲ್ಲಿ ಇದರ ಪ್ರಮಾಣ ಅಧಿಕವಾಗಿದೆ. ಭಾರತದಲ್ಲಿ ಶಿಕ್ಷಣದ ಗುಣಮಟ್ಟ ದಿನೇದಿನೇ ಕುಸಿಯುತ್ತಿದೆ. ಯೋಜನೆಗಳ ಅಸಮರ್ಪಕ ಅನುಷ್ಠಾನವೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಭಾರತದಲ್ಲಿ ಮೂರನೇ ಒಂದರಷ್ಟು ಶಿಕ್ಷಣ ಸಂಸ್ಥೆಗಳು ‘ಸಿ’ ಗ್ರೇಡ್‌ ಹೊಂದಿರುವುದು ವಿಷಾದಕ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಭಾರತದಲ್ಲಿ ಎರಡು ಸಾವಿರಕ್ಕೂ ಅಧಿಕ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಖಾಸಗೀಕರಣದತ್ತ ವಾಲುತ್ತಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಯಾವುದೇ ವಿಶ್ವವಿದ್ಯಾಲಯ ಜಾಗತಿ ಮಟ್ಟದಲ್ಲಿ ಸ್ಥಾನ ಪಡೆಯದಿರುವುದು ನಮ್ಮ ವ್ಯವಸ್ಥೆಯ ನ್ಯೂನ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿನ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಸಂಶೋಧನೆ ಮತ್ತು ಅನ್ವೇಷಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಇದರಲ್ಲಿ ವಿಷಯಾಧಾರಿತ ಅನೇಕ ಅಂತರ ಶಿಸ್ತೀಯ ವಿಶ್ವವಿದ್ಯಾಲಯಗಳ ಶಿಕ್ಷಣ ಸಂಸ್ಥೆಗಳಿಂದ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ’ ಎಂದು ಪ್ರೊ. ಜಿಂದ್ಯಾಲಾ ಬಿ.ಜಿ.ತಿಲಕ್ ಹೇಳಿದರು.

ಕರ್ನಾಟಕ ವಿವಿ ಕುಲಪತಿ ಡಾ. ಪ್ರಮೋದ ಗಾಯಿ ಮಾತನಾಡಿ, ‘ಇಂದಿನ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಸಂಶೋಧನೆ, ಅನ್ವೇಷಣೆ ಮತ್ತು ಕೌಶಲ್ಯಭರಿತ ಪದವಿ ನೀಡುವುದರಿಂದ ನಾವು ಒದಗಿಸುವ ಶಿಕ್ಷಣವು ಅರ್ಥಪೂರ್ಣವಾಗುತ್ತದೆ. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಂಶೋಧನೆ ಮತ್ತು ಅನ್ವೇಷಣೆಯಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ಸಹಾಯಕವಾಗುತ್ತದೆ. ಹೀಗಾಗಿ ಕೌಶಲ ಆಧಾರಿತ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆ ಇದು ಇದೆ’ ಎಂದು ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !