ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಎಲ್ಲೆಡೆ ಈದ್ ಉಲ್‌ ಫಿತ್ರ್‌ ಸಂಭ್ರಮ

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ; ಪರಸ್ಪರ ಶುಭಾಶಯ ವಿನಿಮಯ
Published 11 ಏಪ್ರಿಲ್ 2024, 15:26 IST
Last Updated 11 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಈದ್ ಉಲ್‌ ಫಿತ್ರ್‌ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಹಬ್ಬದ ಪ್ರಯುಕ್ತ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನಕ್ಕೆ ಬಂದ ಮಕ್ಕಳು, ವೃದ್ಧರು, ಯುವಕರು ಉರಿ ಬಿಸಿಲಿನಲ್ಲೂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರೆ, ಯುವಕರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಸಮುದಾಯದವರು ಪರಸ್ಪರ ಅಪ್ಪಿಕೊಂಡು, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆ ಬಳಿಕ ಮೈದಾನದ ಬಳಿ ಬಡವರಿಗೆ ದಾನ ನೀಡಿದರು. ಲೋಕ ಕಲ್ಯಾಣ, ಸಮೃದ್ಧ ಮಳೆ, ಬೆಳೆಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಜರತ್ ಮೌಲಾನಾ ಮುಫ್ತಿವೊ ಖಾರಿ ಜಹಿರೊದ್ದೀನ ಖಾಜಿ ಸಾಹೇಬ್ ಖಿಬಲಾ ಪ್ರಾರ್ಥನೆಯ ಸಾನ್ನಿಧ್ಯ, ಎ.ಎಂ.ಹಿಂಡಸಗೇರಿ ನೇತೃತ್ವ ವಹಿಸಿದ್ದರು.

ಸಚಿವ ಸಂತೊಷ್‌ ಲಾಡ್‌, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಹೇಂದ್ರ ಸಿಂಘಿ, ಶರಣಪ್ಪ ಕೊಟಗಿ ಇದ್ದರು.

ಬಾಷಾಸಾಬ್ ಅತ್ತಾರ, ಬಶೀರ ಹಳ್ಳೂರ, ದಾದಾ ಖೈರಾತಿ, ರಫೀಕ ಬಂಕಾಪೂರ, ಇಲಿಯಾಸ್‌ ಮನಿಯಾರ, ಬಶೀರ ಗುಡಮಾಲ್, ನವೀದ್ ಮುಲ್ಲಾ, ಮಹೆಮೂದ ಕೊಳೂರ, ಇರ್ಶಾದ ಬಳ್ಳಾರಿ, ಮುಶ್ತಾಕ ಸುಂಡಕೆ, ಅನ್ವರ ಮುಧೋಳ, ಯುಸೂಫ ಸವಣೂರ, ಇಕ್ಬಾಲ್ ನವಲೂರ, ವಿವಿಧ ಮೊಹಲ್ಲಾಗಳ ಮುತವಲ್ಲಿಗಳು ಹಾಗೂ ಈದ್ಗಾ ಕಮಿಟಿ ಅಧ್ಯಕ್ಷರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ, ದಟ್ಟಣೆ ಆಗದಂತೆ ಕ್ರಮ ವಹಿಸಲಾಗಿತ್ತು.

ಮೂರು ಸಾವಿರ ಮಠಕ್ಕೆ ಭೇಟಿ; ಸಾಮೂಹಿಕ ಪ್ರಾರ್ಥನೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಮುಸ್ಲಿಂ ಮುಖಂಡರು ಮೂರುಸಾವಿರ ಮಠಕ್ಕೆ ಭೇಟಿ ನೀಡಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ರಂಜಾನ್‌ ಮಾಸದದಲ್ಲಿ ಉಪವಾಸ ವ್ರತ ಆಚರಿಸಿದ್ದ ಸಮುದಾಯದವರು ಹಬ್ಬದಂದು ವ್ರತ ಪೂರೈಸಿ ಕುಟುಂಬದವರು, ಸ್ನೇಹಿತರು, ಸಂಬಂಧಿಕರೊಂದಿಗೆ ಹಬ್ಬದ ಭೋಜನ ಸವಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿ ಅಂಜುಮನ್‌ ಸಂಸ್ಥೆಯ ಎ.ಎಂ.ಹಿಂಡಸಗೇರಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪಾಲ್ಗೊಂಡಿದ್ದರು
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿ ಅಂಜುಮನ್‌ ಸಂಸ್ಥೆಯ ಎ.ಎಂ.ಹಿಂಡಸಗೇರಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪಾಲ್ಗೊಂಡಿದ್ದರು

ಅಮರಗೋಳದ ಮಸೀದಿಯಿಂದ ಅಲ್ಲಾಹುವಿನ ಸ್ಮರಣೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಶೌಕತ್‌ ಅಲಿ ಮುಲ್ಲಾ ಖುರಾನ್‌ ಪಠಣ ಮಾಡಿದರು.

‘ಹಿಂದೂ –ಮುಸ್ಲಿಮರು ಬಾವೈಕ್ಯದಿಂದ ಬಾಳಬೇಕು. ಬಿಸಿಲಿನ ತಾಪಕ್ಕೆ ಜನ, ಜಾನುವಾರುಗಳು ತತ್ತರಿಸಿದ್ದು, ಮಳೆ, ಬೆಳೆ ಚೆನ್ನಾಗಿ ಆಗಬೇಕು, ಸಮೃದ್ಧ ಸಮಾಜ ನಿರ್ಮಾಣವಾಗಬೇಕು’ ಎಂದು ಪ್ರಾರ್ಥಿಸಲಾಯಿತು.

ಈದ್ ಉಲ್ ಫಿತ್ರ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಮಕ್ಕಳು
ಈದ್ ಉಲ್ ಫಿತ್ರ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಮಕ್ಕಳು

ಅಮರಗೋಳ ಮುಸ್ಲಿಂ ಸಮಾಜದ ಅಧ್ಯಕ್ಷ ದಾದಾಪೀರ ದರ್ಗಾದ, ಮಾಬುಸಾಬ ನದಾಫ್, ಖಾಸೀಮಸಾಬ ದರ್ಗಾದ, ನಜೀರಅಹ್ಮದ ಕೋಲಕಾರ, ರಪೀಕ ದರ್ಗಾದ, ಅಬ್ಬಾಸಲಿ ಮುಲ್ಲಾ, ಖಾದೀರಸಾಬ ದರ್ಗಾದ, ಬಾಬಾಜಾನ ಅರಳಿಕಟ್ಟಿ, ಹಜರತಅಲೀ ಮುಲ್ಲಾ, ರಾಜೇಸಾಬ ಮುಳ್ಳೂರ ರಾಯಸಾಬ ದರ್ಗಾದ ಇದ್ದರು.

ಈದ್ ಉಲ್‌ ಫಿತ್ರ್‌ ಪ್ರಯುಕ್ತ ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು
ಈದ್ ಉಲ್‌ ಫಿತ್ರ್‌ ಪ್ರಯುಕ್ತ ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು

ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನಲ್ಲಿ ಧರ್ಮಗುರು ನಯಿಮುದ್ದೀನ್ ಅಶ್ರಫಿ ಪ್ರಾರ್ಥನೆಯ ಸಾನ್ನಿಧ್ಯ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ನವಾಜ್ ಕಿತ್ತೂರು, ಬಶೀರ್‌ ಹಳ್ಳೂರು, ರಫಿಕ್ ಬಂಕಾಪುರ,  ಇಮಾಮ್ ಹುಸೇನ್ ಮಡಕಿ, ಅಷ್ಪಕ್ ಬಿಜಾಪುರ ಇದ್ದರು.

ಬೈರಿದೇವರಕೊಪ್ಪ, ಮಂಟೂರು ರಸ್ತೆಯ ಮಿಲ್ಲತ್‌ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈದ್‌ ಉಲ್‌ ಫಿತ್ರ್‌ ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಮುಖಂಡರು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಶಾಸಕ ಪ್ರಸಾದ ಅಬ್ಬಯ್ಯ ಹಾಜರಿದ್ದರು

ಈದ್ ಉಲ್ ಫಿತ್ರ್ ಪ್ರಯುಕ್ತ ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಗುರುವಾರ ಪ್ರಾರ್ಥನೆ ಸಲ್ಲಿಸಿದರು
ಈದ್ ಉಲ್ ಫಿತ್ರ್ ಪ್ರಯುಕ್ತ ಹಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಗುರುವಾರ ಪ್ರಾರ್ಥನೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT