ಚಂದ್ರ ದರ್ಶನ ಆಧರಿಸಿ ಹಬ್ಬ ನಿಗದಿ
‘ಇಸ್ಲಾಂ ಧರ್ಮದಲ್ಲೇ ದೊಡ್ಡ ಹಬ್ಬ ಇದು. ರಂಜಾನ್ ಮಾಸದ ವೇಳೆ ಎಲ್ಲಾ ಸಮುದಾಯದ ಜನರ ಒಳಿತಿಗಾಗಿ ಅಲ್ಲಾಹು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಧರ್ಮದಲ್ಲಿ ತಿಳಿಸಿದಂತೆ ನಮ್ಮ ದುಡಿಮೆಯ ಅಲ್ಪ ಭಾಗವನ್ನು ಬಡವರಿಗೆ ದಿನಸಿ, ಬಟ್ಟೆ, ಹಣವನ್ನು ದಾನ (ಜಕಾತ್) ಮಾಡುತ್ತೇವೆ‘ ಎಂದು ಹುಬ್ಬಳ್ಳಿಯ ಅಂಜುಮನ್–ಇ–ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ತಿಳಿಸಿದರು. ‘ಹಬ್ಬದ ಆಚರಣೆಯು ಚಂದ್ರ ದರ್ಶನದ ಮೇಲೆ ಅವಲಂಬಿಸಿದೆ. ಭಾನುವಾರ ಸಂಜೆ ನಮ್ಮ ಸಂಸ್ಥೆಯ ಸಮಿತಿಯ ಸದಸ್ಯರು ಹಬ್ಬದ ಆಚರಣೆ ದಿನದ ಬಗ್ಗೆ ತೆಗೆದುಕೊಳ್ಳುವ ನಿರ್ಣಯವನ್ನು ಆಧರಿಸಿ ಹಬ್ಬದ ದಿನವನ್ನು ನಿಗದಿ ಮಾಡುತ್ತೇವೆ’ ಎಂದರು. ‘ಯುಗಾದಿ ಹಾಗೂ ಈದ್–ಉಲ್ ಫಿತ್ರ್ ಹಬ್ಬಗಳು ಜೊತೆಯಲ್ಲಿಯೇ ಬಂದಿರುವುದರಿಂದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಹಬ್ಬ ಆಚರಿಸಬೇಕು‘ ಎಂದರು.