ಶುಕ್ರವಾರ, ಮೇ 27, 2022
28 °C

ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕ್ರಿಸ್‌ಮಸ್‌, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ನೈರುತ್ಯ ರೈಲ್ವೆ ಆರಂಭಿಸಿರುವ ವಿಶೇಷ ರೈಲುಗಳ ಸಂಚಾರವನ್ನು ಇನ್ನು ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ (ಜ. 30), ಲೋಕಮಾನ್ಯ ತಿಲಕ್‌ ಟರ್ಮಿನಸ್‌–ಹುಬ್ಬಳ್ಳಿ (ಜ. 31), ಧಾರವಾಡ–ಮೈಸೂರು ಎಕ್ಸ್‌ಪ್ರೆಸ್‌ (ಜ. 15), ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ (ಜ. 16), ವಿಜಯವಾಡ–ಹುಬ್ಬಳ್ಳಿ (ಜ.19), ಹುಬ್ಬಳ್ಳಿ–ವಿಜಯವಾಡ (ಜ. 20), ಹುಬ್ಬಳ್ಳಿ–ಸಿಕೆಂದರಾಬಾದ್‌ (ಜ. 30), ಸಿಕೆಂದರಾಬಾದ್‌–ಹುಬ್ಬಳ್ಳಿ (ಜ. 31), ಕೆಎಸ್‌ಆರ್‌ ಬೆಂಗಳೂರು–ಧಾರವಾಡ (ಜ. 30) ಮತ್ತು ಧಾರವಾಡ–ಕೆಎಸ್‌ಆರ್‌ ಬೆಂಗಳೂರು (ಜ. 31), ಧಾರವಾಡ–ಸೊಲ್ಲಾಪುರ (ಜ. 15), ಸೊಲ್ಲಾಪುರ–ಧಾರವಾಡ (ಜ. 16), ಹುಬ್ಬಳ್ಳಿ–ಸೊಲ್ಲಾಪುರ (ಜ.15), ಸೊಲ್ಲಾಪುರ–ಹುಬ್ಬಳ್ಳಿ (ಜ.16), ಹುಬ್ಬಳ್ಳಿ–ಬಳ್ಳಾರಿ (ಜ.15), ಬಳ್ಳಾರಿ–ಹುಬ್ಬಳ್ಳಿ (ಜ.16) ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ.

ಪ್ರತಿ ಶುಕ್ರವಾರ ಹುಬ್ಬಳ್ಳಿಯಿಂದ ವಾರಣಾಸಿಗೆ ತೆರಳುವ ರೈಲನ್ನು ಜ. 29ರ ವರೆಗೆ, ಪ್ರತಿ ಭಾನುವಾರ ವಾರಣಾಸಿಯಿಂದ–ಹುಬ್ಬಳ್ಳಿಗೆ ಬರುವ ರೈಲನ್ನು 30ರ ವರೆಗೆ ವಿಸ್ತರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು