ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪ, ಗಾಮನಗಟ್ಟಿ, ಅಮರಗೋಳ, ಉಣಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಸೋಮವಾರ ನಗರದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ರೈತ ದಿನಾಚರಣೆ ಆಚರಿಸಿದರು.

ಅಮರಗೋಳ ಎಪಿಎಂಸಿ ಮಾರುಕಟ್ಟೆಯಿಂದ ಬೈರಿದೇವರಕೊಪ್ಪ, ಉಣಕಲ್, ವಿದ್ಯಾಣಗರ, ಹೊಸೂರು ಮಾರ್ಗವಾಗಿ ಸಾಗಿದ ಮೆರವಣಿಗೆ ಕಿತ್ತೂರಾಣಿ ಚನ್ನಮ್ಮ ವೃತ್ತದಲ್ಲಿ ಮುಕ್ತಾಯವಾಯಿತು. ಅಲ್ಲಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಸುಮಾರು 60 ಟ್ರ್ಯಾಕ್ಟರ್ಗಳ ಮೂಲಕ ಬೃಹತ್ ಮೆರವಣಿಗೆ ನಡೆಸಿದರು.

ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ಹೋರಾಡುತ್ತಿರುವ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ರ್ಯಾಲಿ ನೇತೃತ್ವ ವಹಿಸಿದ್ದರು. ಶಂಕರಗೌಡ ಟಾಕನಗೌಡ್ರ, ಶಿವಾನಂದ್ ಸುಣಗಾರ, ಮಂಜುನಾಥ ಕೊಪ್ಪದ, ವಿನಾಯಕ ಮಾಯಕಾರ, ಮಂಜುನಾಥ ಮಾಯಕಾರ, ಪರಮೇಶ್ವರ ಜೋಗಾಯಿ, ರವಿ ಗುಂಡೂರ, ರಮೇಶ ದೇವಕ್ಕಿ, ಚನಬಸಪ್ಪ ಮಟ್ಟಿ, ರುದ್ರಪ್ಪ ಹೊರಕೇರಿ, ಈರಣ್ಣ ಎಡವಣ್ಣವರ, ಬಸವರಾಜ ಜಿದ್ದಿ, ಮಲ್ಲಿಕಾರ್ಜುನ ಗುಡ್ಡಪ್ಪನವರ ಸೇರಿದಂಗೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.