ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ವಚನ ಸಂದೇಶ ಪಾಲಿಸಿ’

Last Updated 12 ಫೆಬ್ರುವರಿ 2022, 14:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶರಣರ ವಚನಗಳ ಸಂದೇಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಜಿ.ಎ. ತಿಗಡಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹುಬ್ಬಳ್ಳಿ ತಾಲ್ಲೂಕು ಘಟಕ ಹಾಗೂ ಎಸ್.ಜೆ.ಎಂ.ವಿ.ಎಸ್‌ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ಸಹಯೋಗದಲ್ಲಿ ಪ್ರೊ.ಜಿ.ಸಿ. ವೀರಭದ್ರಯ್ಯನವರ ಹಾಗೂ ಮಹಾಂತಪ್ಪ ಕೊ ಆಪ್ ಕ್ರೆಡಿಟ್ ಸೊಸೈಟಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಜಿಲ್ಲಾ ಮಟ್ಟದ ವಚನ ಗಾಯನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೂಲ ವಚನಗಳನ್ನು ಹೇಳಬೇಕು. ಮಹಿಳಾ ವಚನಕಾರ್ತಿಯರ ವಚನಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಬೇಕೆಂದರು. ವಚನಗಳನ್ನು ಅರ್ಥೈಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಶರಣರ ವಚನಗಳನ್ನು ಪ್ರತಿದಿನ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಪಿ. ಜ್ಯೋತಿ ಲಕ್ಷ್ಮಿ, ಡಾ.ಶಿವಲೀಲಾ ವೈಜನಾಥ್ ಅವರು ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಪ್ರೊ.ಜಿ.ವಿ. ಚಿಕ್ಕಮಠ, ಎಂ.ಕೆ. ನಾಯಕರ, ಬಿ.ಎಸ್. ಮಾಳವಾಡ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೆ.ಎಸ್. ಕೌಜಲಗಿ, ಗೌರವ ಕಾರ್ಯದರ್ಶಿ ಪ್ರೊ.ಎಸ್.ಆರ್ ಆಶಿ ಇದ್ದರು.

ವಚನ ಗಾಯನ ಸ್ಪರ್ಧೆಯ ಫಲಿತಾಂಶ:ಕುಮಾರ ಶಿವಸ್ವಾಮಿ, ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯ, (ಪ್ರಥಮ),ಕೋಮಲ್ ನಾಡಿಗೇರ, ಕೆ.ಎಲ್.ಇ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ದ್ವಿತೀಯ),ಸುಷ್ಮಾ ಎಸ್ ಚಾವಟೆ, ಚಿನ್ಮಯಿ ಪದವಿ ಪೂರ್ವ ಕಾಲೇಜು ಹಾಗೂನಂದಿನಿ ಹ ಜಕನೂರ, ಎಸ್.ಜೆ.ಎಂ.ವಿ.ಎಸ್ ಮಹಿಳಾ ಮಹಾವಿದ್ಯಾಲಯ (ತೃತೀಯ).ದೀಪ್ತಿ ನಾಗನೂರ, ‌ಬೆಸ್ ಪದವಿಪೂರ್ವ ಕಾಲೇಜು ಹಾಗೂನಮೃತಾ ಹಿರೇಮಠ, ಓರಿಯೆಂಟಲ್ ಪದವಿಪೂರ್ವ ಕಾಲೇಜು (ಸಮಾಧಾನಕರ ಬಹುಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT