ಹುಬ್ಬಳ್ಳಿ: ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ (80) ಅವರು ಶುಕ್ರವಾರ ನಿಧನರಾದರು. ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ಅವರನ್ನು ನಗರದ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ 6.45ಕ್ಕೆ ಕೊನೆಯುಸಿರೆಳೆದರು.

ರಾಜಕೀಯದಲ್ಲಿ ಹೊನ್ನಳ್ಳಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ಹೊನ್ನಳ್ಳಿ ಅವರು, ಎಸ್.ಆರ್. ಬೊಮ್ಮಾಯಿ ಅವರಿಂದ ಪ್ರಭಾವಿತರಾಗಿ ಜೆಡಿಎಸ್ ಸೇರುವುದರೊಂದಿಗೆ ರಾಜಕೀಯ ಪ್ರವೇಶಿಸಿದರು. ನಂತರ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ, ಕಾಂಗ್ರೆಸ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಸೇರಿದ್ದರು. ಬಿಎಸ್ವೈ ಅವರು ಬಿಜೆಪಿಗೆ ಮರಳಿದ ಬಳಿಕ ಹೊನ್ನಳ್ಳಿ ಅವರು ತಟಸ್ಥರಾಗಿ ಉಳಿದಿದ್ದರು.

‘ಎರಡು ಬಾರಿ ಅಂಜುಮನ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಅವರು, ಜೆಡಿಎಸ್ನಿಂದ 1989–90ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ನಂತರ ಕಾಂಗ್ರೆಸ್ ಸೇರಿದ್ದ ಅವರು, ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರದಿಂದ (ಇಂದಿನ ಪೂರ್ವ ವಿಧಾನಸಭಾ ಕ್ಷೇತ್ರ) ಕಾಂಗ್ರೆಸ್ನಿಂದ ಎರಡು ಸಲ ಗೆದ್ದಿದ್ದರು. ಎಸ್.ಎಂ. ಕೃಷ್ಣಾ ಅವರ ನೇತೃತ್ವದ ಸರ್ಕಾರದಲ್ಲಿ ಕಾರ್ಮಿಕ ಹಾಗೂಯುವಜನ ಮತ್ತು ಕ್ರೀಡಾ ಸಚಿವರಾಗಿ ಜನಪರ ಕೆಲಸಗಳನ್ನು ಮಾಡಿದ್ದರು’ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುಸೂಫ ಸವಣೂರ ಅವರು ಹೇಳಿದರು.

‘ತಮ್ಮ ಕ್ಷೇತ್ರದ ಎಸ್.ಎಂ. ಕೃಷ್ಣಾ ನಗರ, ಸೋನಿಯಾಗಾಂಧಿ ನಗರ, ಬೀಡಿ ಕಾರ್ಮಿಕರ ನಗರ ಸೇರಿದಂತೆ ನಗರದ ವಿವಿಧೆಡೆ, ಬಡವರಿಗೆ ಹೆಚ್ಚಿನ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದರು. ತಾನೊಬ್ಬ ಶಾಸಕ ಎಂಬ ಅಹಂ ಇಲ್ಲದ ಅವರು, ಸಾಮಾನ್ಯರ ನಿಜವಾದ ಪ್ರತಿನಿಧಿಯಾಗಿದ್ದರು. ಜಾತಿ ಮತ್ತು ಧರ್ಮ ಮೀರಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದರು. ಜನರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿತ್ತು’ ಎಂದು ಬಿಜೆಪಿ ಮುಖಂಡ ಡಾ. ಪಾಂಡುರಂಗ ಪಾಟೀಲ ನೆನೆದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಅಂಜುಮನ್ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಹಾಬ್ ಮುಲ್ಲಾ, ಅಶ್ರಫ ಅಲಿ, ಪದಾಧಿಕಾರಿಗಳು, ಹುಬ್ಬಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮೋಹನ ಅಸುಂಡಿ ಸೇರಿದಂತೆ ಸ್ಥಳೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಹೊನ್ನಳ್ಳಿ ಅವರ ಪಾರ್ಥೀವ ಶರೀರದ ದರ್ಶನ ಪಡೆದರು.

ಸಂಜೆ 5.30ಕ್ಕೆ ಕೇಶ್ವಾಪುರದಲ್ಲಿರುವ ಅವರ ನಿವಾಸದಿಂದ ಪಾರ್ಥೀವ ಶರೀರ ಹೊರಡಲಿದೆ. ಏಳು ಗಂಟೆಗೆ ತೊರವಿಹಕ್ಕಲದಲ್ಲಿರುವ ಕಬರಸ್ತಾನದಲ್ಲಿ (ಸ್ಮಶಾನ) ಅಂತಿಮ ಸಂಸ್ಕಾರ ನೆರವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.