ಶನಿವಾರ, ಜನವರಿ 18, 2020
26 °C

ರಾಜ್ಯದ ನಾಲ್ಕು ಕಡೆ ಹೊಸ ಕ್ರಿಕೆಟ್‌ ಕ್ರೀಡಾಂಗಣ: ಮೆನನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮುಂಬರುವ ದಿನಗಳಲ್ಲಿ ದಾವಣಗೆರೆ, ಹಾಸನ, ಗದಗ ಮತ್ತು ಕೊಡಗಿನಲ್ಲಿ ಕ್ರಿಕೆಟ್‌ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ್‌ ಮೆನನ್‌ ಹೇಳಿದರು.

ಸೋಮವಾರ ಇಲ್ಲಿ ನಡೆದ ಕೆ.ಎಸ್‌.ಸಿ.ಎ ಧಾರವಾಡ ವಲಯದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ಹಾಸನ, ದಾವಣಗೆರೆ ಮತ್ತು ಗದಗಿನಲ್ಲಿ ಸಮತಟ್ಟಾದ ಭೂಮಿ ಸಿಕ್ಕಿರುವುದರಿಂದ ಅಲ್ಲಿ ಮೈದಾನ ನಿರ್ಮಾಣ ಬೇಗ ಮುಗಿಯುತ್ತದೆ. ಕೊಡಗಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಒಂದೆರೆಡು ವರ್ಷ ಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ಈ ಎಲ್ಲ ಊರುಗಳಲ್ಲಿ ಪಂದ್ಯವಾಡಲು ಅನುಕೂಲವಾಗುವಂತೆ ಮೈದಾನ ನಿರ್ಮಿಸಲಾಗುವುದು. ಎರಡನೇ ಹಂತದಲ್ಲಿ ಪೆವಿಲಿಯನ್‌ ಮತ್ತು ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು