ಮಂಗಳವಾರ, ಮೇ 17, 2022
26 °C

ಆನ್‌ಲೈನ್‌ನಲ್ಲಿ ₹80 ಸಾವಿರ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪ್ಲಿಫ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿದ ವಸ್ತು ತಲುಪಿಸಲು ವಿಳಾಸ ತಪ್ಪಾಗಿದೆ ಎಂದು ಮಂಟೂರು ರಸ್ತೆಯ ಐ.ಎಲ್‌. ವಿಜಾಪುರ ಅವರಿಗೆ ಪ್ಲಿಫ್‌ಕಾರ್ಟ್‌ ಪ್ರತಿನಿಧಿಯೆಂದು ಕರೆ ಮಾಡಿದ ವ್ಯಕ್ತಿ, ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ₹80 ಸಾವಿರ ವರ್ಗಾಯಿಸಿಕೊಂಡಿದ್ದಾನೆ.

ಆರ್ಡರ್‌ ಮಾಡಿರುವ ವಿಳಾಸ ತಪ್ಪಾಗಿದ್ದು, ಅದನ್ನು ಸರಿಪಡಿಸಲು ₹5 ಆನ್‌ಲೈನ್‌ನಲ್ಲಿ ಕಳುಹಿಸಬೇಕು ಎಂದು ವಿಜಾಪುರ ಅವರ ಮೊಬೈಲ್‌ಗೆ ಒಟಿಪಿ ಹಾಗೂ ಲಿಂಕ್‌ ಕಳುಹಿಸಿದ್ದ. ಲಿಂಕ್‌ ತೆರೆದು ಮಾಹಿತಿ ಭರ್ತಿ ಮಾಡಿ ಯುಪಿಐ ಪಿನ್‌ ಹಾಕಿ ಸಬ್‌ಮಿಟ್‌ ಮಾಡಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ: ಕೆವೈಸಿ ಅಪ್‌ಡೇಟ್‌ ಮಾಡದಿದ್ದರೆ ಬ್ಯಾಂಕ್‌ ಖಾತೆ ಬಂದ್‌ ಆಗುತ್ತದೆ ಎಂದು ಕೇಶ್ವಾಪುರದ ಟಿ.ಎಂ. ಡಿಸೋಜಾ ಅವರ ಮೊಬೈಲ್‌ ನಂಬರ್‌ಗೆ ಮೆಸೆಜ್‌ ಕಳುಹಿಸಿದ ವ್ಯಕ್ತಿ, ಅವರಿಂದಲೇ ಬ್ಯಾಂಕ್‌ ಮಾಹಿತಿ ಪಡೆದು ₹49 ಸಾವಿರ ವರ್ಗಾಯಿಸಿಕೊಂಡಿದ್ದಾನೆ.

ಡಿಸೋಜಾ ಅವರು ಮೆಸೆಜ್‌ ಬಂದ ನಂಬರ್‌ಗೆ ಕರೆ ಮಾಡಿದಾಗ ಬ್ಯಾಂಕ್‌ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಖಾತೆ ನಂಬರ್‌, ಎಟಿಎಂ ಕಾರ್ಡ್‌ ನಂಬರ್‌, ಸಿವಿವಿ ನಂಬರ್‌ ಹಾಗೂ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹61ಸಾವಿರ ವಂಚನೆ: ಆನ್‌ಲೈನ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಜನರೇಟ್‌ ಮಾಡಿಸಿಕೊಡುವುದಾಗಿ ಹೇಳಿ ಧಾರವಾಡದ ಚನ್ನಮ್ಮನಗರದ ನಿವಾಸಿ ಯೋಗೇಶ ಹಿರೇಮಠ ಅವರಿಗೆ ಕರೆ ಮಾಡಿದ ವಂಚಕ, ₹61ಸಾವಿರ ವರ್ಗಾಯಿಸಿಕೊಂಡಿದ್ದಾನೆ.

ಯೋಗೀಶ ಅವರಿಗೆ ಎನಿಡೆಸ್ಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಲು ಹೇಳಿದ ವ್ಯಕ್ತಿ, ಕ್ರೆಡಿಟ್‌ ಕಾರ್ಡ್‌ ಮಾಹಿತಿ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.