ಸೋಮವಾರ, ಮೇ 23, 2022
21 °C

ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕುಸುಗಲ್ಲ ರಸ್ತೆಯ ವಸಂತನಗರದ ಯಂತ್ರೋದ್ಧಾರಕ ಆಂಜನೇಯ, ಪಂಪಾಪತಿ ಈಶ್ವರ ಹಾಗೂ ಗಣಪತಿ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಮೇ 4ರಿಂದ 8ರವರೆಗೆ ಜರುಗಲಿದೆ.

4ರಂದು ಬೆಳಿಗ್ಗೆ 7ಕ್ಕೆ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, 9ಕ್ಕೆ ಗಣಹೋಮ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. 5ರಂದು ಬೆಳಿಗ್ಗೆ 6ಕ್ಕೆ ನೂತನ ಇಡಗುಂಜಿ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪಲಿಮಾರು ಮಠದ ವಿದ್ಯಾಧೀಶ ತೀರ್ಥರಿಂದ ನೆರವೇರಲಿದೆ. ಸಂಜೆ ವೆಂಕಟೇಶಾಚಾರ್ಯ ಜಹಗೀರದಾರ ಅವರಿಂದ ಪ್ರವಚನ ನಡೆಯಲಿದೆ.

6ರಂದು ಲೋಕ ಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ, ಸಂಜೆ 6.30ಕ್ಕೆ ವಸಂತನಗರದ ಮಹಿಳಾ ಮಂಡಳದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7ರಂದು ಬೆಳಿಗ್ಗೆ ಪೂಜೆ ಅಭಿಷೇಕ, 10ಕ್ಕೆ ಪವಮಾನ ಹೋಮ ಜರುಗಲಿದೆ. ಸಂಜೆ 6.30ಕ್ಕೆ ಆಕಾಶವಾಣಿ ಕಲಾವಿದ ಶ್ರೀಕಾಂತ ಬಾಕಳೆ ಹಾಗೂ ನಾಗಲಕ್ಷ್ಮೀ ಬಾಕಳೆ ಅವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ.

8ರಂದು ಬೆಳಿಗ್ಗೆ 8ಕ್ಕೆ ಸ್ಥಾಪನಾ ಮೂರ್ತಿಗಳಿಗೆ ಏಕಾದಶ ರುದ್ರಾಭಿಷೇಕ ಜರುಗಲಿದೆ. 11ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಪ್ರಸಾದ ವಿತರಣೆಯಿಂದ ಪ್ರತಿಷ್ಠಾಪನಾ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ ಎಂದು ವಸಂತನಗರದ ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು