ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಆಸ್ಪತ್ರೆಗೆ ಸಂಚಾರಿ ಆರೋಗ್ಯ ವಾಹಿನಿ ಹಸ್ತಾಂತರ

Published 10 ಮೇ 2024, 15:39 IST
Last Updated 10 ಮೇ 2024, 15:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ₹1.20 ಕೋಟಿ ಮೊತ್ತದ ಸಂಚಾರಿ ಆರೋಗ್ಯ ವಾಹಿನಿಯನ್ನು ಈಚೆಗೆ ಹಸ್ತಾಂತರಿಸಲಾಯಿತು.

‘ಆರೋಗ್ಯ ವಾಹಿನಿ ವಾಹನವು ಕ್ಯಾನ್ಸರ್ ರೋಗವನ್ನು ಮೊದಲನೇ ಹಂತದಲ್ಲಿಯೇ ಗುರುತಿಸುವ ಯಂತ್ರಗಳನ್ನು ಒಳಗೊಂಡಿದೆ. ಉಚಿತ ತಪಾಸಣೆ ಮಾಡಲಾಗುವುದು’ ಎಂದು ರೋಟರಿ ಅಧ್ಯಕ್ಷ ಅರವಿಂದ ಕುಬಸದ ತಿಳಿಸಿದರು.

ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ಬಿ.ಆರ್. ಪಾಟೀಲ, ‘ಮೊದಲ ಹಂತದಲ್ಲಿ ಕ್ಯಾನ್ಸರ್ ರೋಗವನ್ನು ಗುರುತಿಸುವುದರಿಂದ ಸಮಯ, ಹಣ ಉಳಿತಾಯ ಹಾಗೂ ತ್ವರಿತ ಚಿಕಿತ್ಸೆ ದೊರಕಲು ಸಹಾಯವಾಗುತ್ತದೆ’ ಎಂದರು.

ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ನಾಸೀರ ಬೊರ್ಸದ್ವಾಲಾ, ಕಾರ್ಯದರ್ಶಿ ವಸಂತ ಭಸ್ಮೆ, ಸಹಾಯಕ ಗವರ್ನರ್ ಬಿನೊಯ ಮೊಮಾಯಾ, ಟಾಟಾ ಮೋಟರ್ಸ್ ಬೇಲೂರು ಇಂಡಸ್ಟ್ರೀಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಧರ ಕಟ್ಟಿ, ರೋಟರಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರವಿ ವಡಲಮನಿ, ಸಂಗ್ರಾಮ ಪಾಟೀಲ, ಎಂ.ವಿ. ಕರಮರಿ, ರಾಜಾ ದೇಸಾಯಿ, ಬಾಪು ಬಿರಾದಾರ, ಎ.ವಿ. ಸಂಕನೂರ, ಮಂಜುನಾಥ ಹೊಂಬಳ, ಮೂಕರ್ತಿಹಾಳ, ಎಸ್.ಎಸ್. ಹಿರೇಮಠ, ವಾಸುಕಿ ಸಂಜಿ, ಸಿದ್ದೇಶ್ವರ ಕಮ್ಮಾರ, ಎ.ವಿ. ಸಂಕನೂರ, ಅಮರ ಸೂಜಿ, ಸುರೇಂದ್ರ ಪರ‍್ವಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT