ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರೆಡ್ಡಿ ಮಲ್ಲಮ್ಮ ಜಯಂತಿ: ಬಿಡ್ನಾಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ

ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ: ಅಬ್ಬಯ್ಯ
Last Updated 10 ಮೇ 2022, 14:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ಅವರು ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಉತ್ಸವ ಸಮಿತಿ ಬಿಡ್ನಾಳದಲ್ಲಿ ಹಮ್ಮಿಕೊಂಡಿದ್ದ ಮಲ್ಲಮ್ಮನವರ ಜಯಂತ್ಯುತ್ಸವ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಲ್ಲಿ ಶೀಘ್ರವೇ ದೇಗಲ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಉದ್ದೇಶಿತ ದೇವಸ್ಥಾನದ ಮುಂದಿನ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಯು.ಜಿ ಕೇಬಲ್ ಅಳವಡಿಕೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ತಾವು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧರಾಗಿ ನಡೆದುಕೊಂಡ ಹೇಮರೆಡ್ಡಿ ಮಲ್ಲಮ್ಮನವರು ಸಮಾಜದ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರಾಗಿದ್ದಾರೆ. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ ಇತರರಿಗಿಂತ ಭಿನ್ನವಾಗಿ ನಿಲ್ಲಲು ಅವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣ’ ಎಂದು ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿದರು. ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪಾಂಡುರಂಗ ಪಾಟೀಲ, ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಸ್ಥಳೀಯರಾದ ಮುದುಕಪ್ಪ ನಂದಿಹಳ್ಳಿ, ರವಿ ಚನ್ನಳ್ಳಿ, ರಾಜು ಅಡವಿ, ಮೋಹನ ನಂದಿಹಳ್ಳಿ, ರಘು ಯಲ್ಲಕ್ಕನವರ, ಸಿದ್ದಪ್ಪಣ್ಣ ಮೇಟಿ, ಮಲ್ಲೇಶಪ್ಪ ಹಿರೂರು, ಶಿವಣ್ಣ ಚಿಂಚೊಳ್ಳಿ ಇದ್ದರು.

ತತ್ವಾದರ್ಶ ಅಳವಡಿಸಿಕೊಳ್ಳಲು ಸಲಹೆ

ಹುಬ್ಬಳ್ಳಿ: ‘ಹೇಮರೆಡ್ಡಿ ಮಲ್ಲಮ್ಮ ಅವರು ಸೂರ್ಯ- ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾಮಾತೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಶಹರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ. ಪರಸ್ಪರ ಪ್ರೀತಿ– ಗೌರವದಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲಾ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ಬೋಧಿಸಿದರು’ ಎಂದರು.

ಕೆಎಂಎಫ್ ನಿರ್ದೇಶಕ ಸುರೇಶ ಬಣವಿ, ಫಕೀರಪ್ಪ ತಟ್ಟಿಮನಿ, ಬಸವರಾಜ ರಾಜೂರ, ಹೆಚ್ಚುವರಿ ತಹಶೀಲ್ದಾರ್ ಸಂತೋಷ ಹಿರೇಮಠ, ಗ್ರಾಮೀಣ ಹೆಚ್ಚುವರಿ ತಹಶೀಲ್ದಾರ್ ಹನಮಂತ ಕೊಚ್ಚರಗಿ, ಮುಖಂಡರಾದ ಪ್ರಕಾಶ ಬಿದರಣ್ಣವರ, ಡಿ.ಸಿ.ರಂಗಾರಡ್ಡಿ, ರಾಜೇಶ ಅಡವಿ, ರಘು ಯಲಕ್ಕನವರ, ಹೇಮರಡ್ಡಿ ಕಲಕರೆಡ್ಡಿ, ಪ್ರಕಾಶ ಗುಡಸಲಮನಿ, ಪ್ರಕಾಶ ಕರಡ್ಡಿ, ಬಸವರಾಜ ಬಿಡ್ನಾಳ, ವಿನಯಗೌಡ ಬರಮಗೌಡರ, ಸತೀಶ ಮಾಡಳ್ಳಿ, ರಘುನಾಥ ಗೌಡ, ಕೆಂಪಲಿಂಗನಗೌಡರ, ಎಸ್.ಬಿ. ಪಾಟೀಲ, ಮೋಹನ್ ಹೊಸಮನಿ, ಬಸವರಾಜ ಹೊಂಬಳ, ಶಿವಲೀಲಾ ಹೊಂಬಳ, ಪ್ರತಿಭಾ.ಎಸ್.ಎಸ್, ವೇದಾ ಕರಕರೆಡ್ಡಿ, ವನಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT