ಹುಬ್ಬಳ್ಳಿ: ಹೋಳಿ ಹಬ್ಬದ ಸಂದರ್ಭ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ–ಮುಜಫರ್ಪುರ ನಡುವೆ ಮಾರ್ಚ್ 4ರಿಂದ ಏಪ್ರಿಲ್ 4ರವರೆಗೆ ಎಕ್ಸ್ಪ್ರೆಸ್ ವಿಶೇಷ ರೈಲುಗಳು ಸಂಚರಿಸಲಿವೆ.

ಎಸ್ಎಸ್ಎಸ್ ಹುಬ್ಬಳ್ಳಿ–ಮುಜಫರ್ಪುರ ವಿಶೇಷ ಎಕ್ಸ್ಪ್ರೆಸ್ (07315) ರೈಲು ಮಾರ್ಚ್ 4ರಿಂದ ಏಪ್ರಿಲ್ 1ರವರೆಗೆ ಪ್ರತಿ ಬುಧವಾರ ಸಂಜೆ 5.20ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮೂರನೇ ದಿನ (ಶುಕ್ರವಾರ) ಸಂಜೆ 4 ಗಂಟೆಗೆ ಮುಜಫರ್ಪುರ ನಿಲ್ದಾಣ ತಲುಪಲಿದೆ.

ಮುಜಫರ್ಪುರ–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ (07316) ರೈಲು ಮಾರ್ಚ್ 7ರಿಂದ ಏಪ್ರಿಲ್ 4ರವರೆಗೆ ಪ್ರತಿ ಶನಿವಾರ ಮಧ್ಯಾಹ್ನ 1.15ಕ್ಕೆ ಮುಜಫರ್ಪುರದಿಂದ ಹೊರಟು, ಮೂರನೇ ದಿನ (ಸೋಮವಾರ) ಬೆಳಿಗ್ಗೆ 11.15ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹಲ್ಯಾನಗರ ಮಾರ್ಗವಾಗಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.