ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿಯಲ್ಲಿ ಹನಿಟ್ರ್ಯಾಪ್ ಜಾಲ: ಇಬ್ಬರು ಸೆರೆ

Last Updated 21 ಆಗಸ್ಟ್ 2022, 9:29 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಹುನ್ನೂರ ಗ್ರಾಮ ಹಾಗೂ ತಾಲ್ಲೂಕಿನ ವಿವಿಧೆಡೆ ‘ಹನಿಟ್ರ್ಯಾಪ್’ನಲ್ಲಿ ತೊಡಗಿದ್ದ ಜಾಲವನ್ನು ಗ್ರಾಮಸ್ಥರೇ ಪತ್ತೆಮಾಡಿದ್ದು, ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆಯರನ್ನು ಬಳಸಿ ಯುವಕರನ್ನು ವಂಚಿಸುತ್ತಿದ್ದ ಜಮಖಂಡಿಯ ರವಿ ದೊಡಮನಿ, ಯಲ್ಲಟ್ಟಿ‌ ಗ್ರಾಮದ ಹಣಮಂತ ಯಲ್ಲಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಗಳಕೋಡ ಗ್ರಾಮಸ್ಥ ಬೀರಪ್ಪ ಬರಗಿ ಹಾಗೂ ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಮುಧೋಳದ ಮಹಿಳೆಯನ್ನು ಬಳಸಿಕೊಂಡು ಹಲವು ದಿನಗಳಿಂದ ಇಟ್ಟುಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರು ಎನ್ನಲಾಗಿದೆ.

ಟಕ್ಕಳಕಿ ಗ್ರಾಮ ಪಂಚಾಯಿತಿ ಸದಸ್ಯ ಅನಿಲ ದಳವಾಯಿ ಅವರನ್ನು ಕಲ್ಹಳ್ಳಿ ಗುಡ್ಡದಲ್ಲಿ ಶನಿವಾರ ಅಪಹರಿಸಿ ₹1ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರ ಸಂಬಂಧಿಕರಿಗೆ ಫೋನ್ ಮಾಡಿ ಹಣ ನೀಡುವಂತೆ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕು ಕಾರ್ಯಾಚರಣೆ ನಡೆಸುವ ಹೊತ್ತಿಗೆ, ಗ್ರಾಮದಲ್ಲಿ ಅಪರಿಚಿತರು ಸಂಚರಿಸುವುದನ್ನು ಕಂಡು ಸಂಶಯಗೊಂಡ ಹುನ್ನೂರ ಗ್ರಾಮಸ್ಥರು ಕಾಲುವೆ ಹತ್ತಿರ ಅವರನ್ನು ಹಿಡಿದು ವಿಚಾರಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ. ನಂತರ ಅವರನ್ನು ಹಿಡಿದು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT