ಉತ್ತರ ಕರ್ನಾಟಕದ ಮೊದಲ ಕಾರ್ಗೊ ಸೇವೆಗೆ ಇಂಡಿಗೊ ಏರ್ಲೈನ್ಸ್ ಚಾಲನೆ ನೀಡಿದೆ. ವಿಮಾನ ನಿಲ್ದಾಣದ ಹಳೇ ಟರ್ಮಿನಲ್ನಲ್ಲಿ ಅಂದಾಜು ₹45 ಲಕ್ಷ ವೆಚ್ಚದಲ್ಲಿ ಈ ವಿಭಾಗ ನಿರ್ಮಾಣಗೊಂಡಿದೆ. 1,000 ಚದರ ಮೀಟರ್ ಅಳತೆ ಇರುವ ಕಾರ್ಗೊ ಟರ್ಮಿನಲ್ ಒಂದೇ ಬಾರಿಗೆ 100 ಮೆಟ್ರಿಕ್ ಟನ್ ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.