ಮಂಗಳವಾರ, ಸೆಪ್ಟೆಂಬರ್ 21, 2021
21 °C

ಹುಬ್ಬಳ್ಳಿ‌–ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಪತಿಗೆ ಗೆಲುವು, ಪತ್ನಿಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ‌–ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ರಾಜಾರಾವ್ (ದೊರೈರಾಜ್) ಮಣಿಕುಂಟ್ಲಾ ಹಾಗೂ ಸುಧಾ ಮಣಿಕುಂಟ್ಲಾ ದಂಪತಿ ಸ್ಪರ್ಧಿಸಿದ್ದರು. ಪತ್ನಿ ಸುಧಾ ಸೋಲು ಕಂಡರೆ, ಪತಿ ರಾಜಾರಾವ್ 500 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್‌ 61ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾರಾವ್ ಸ್ಪರ್ಧಿಸಿದ್ದರು. ಅವರ ಪತ್ನಿ ಸುಧಾ ಅವರು ಪಕ್ಕದ ಮಹಿಳಾ ಮೀಸಲು ವಾರ್ಡ್ 59ರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಸುಧಾ ಅವರು ಕಳೆದ ಬಾರಿ 49ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ವಾರ್ಡ್‌ಗಳ ಮರು ವಿಂಗಡಣೆ ಬಳಿಕ ಅವರು ಪ್ರತಿನಿಧಿಸಿದ್ದ ವಾರ್ಡ್‌ನ ಪ್ರದೇಶಗಳು ವಾರ್ಡ್ 61 ಮತ್ತು 59ರಲ್ಲಿ ಹಂಚಿ ಹೋಗಿದ್ದವು.

ಇವನ್ನೂ ಓದಿ...
*
 ಬೆಳಗಾವಿ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?
ಕಲಬುರ್ಗಿ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?

      ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

      ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

      ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.