ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?

Last Updated 6 ಸೆಪ್ಟೆಂಬರ್ 2021, 7:35 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ನೂತನ ವಿದ್ಯಾಲಯದ ಆವರಣದಲ್ಲಿ ಮೊದಲಿಗೆ ‌ಅಂಚೆ ಮತ ಎಣಿಕೆಗೊ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಉಪವಿಭಾಗಾಧಿಕಾರಿ ಮೋನಾ ರೂತ್ ನೇತೃತ್ವದಲ್ಲಿ ವಿವಿಧ ವಾರ್ಡ್ ಚುನಾವಣಾಧಿಕಾರಿಗಳು ಮತ ಪೆಟ್ಟಿಗೆಗಳನ್ನು ಪರಿಶೀಲಿಸಿ ಎಣಿಕೆ ಸಿಬ್ಬಂದಿಗೆ ನೀಡಿದರು.

55 ಟೇಬಲ್ ಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ 55 ವಾರ್ಡುಗಳ ಫಲಿತಾಂಶ ‌ಹೊರಬೀಳಲಿದೆ.

*ಕಲಬುರ್ಗಿ ಮಹಾನಗರ ಪಾಲಿಕೆಯ ವಾರ್ಡ್ ನಂ 36ರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಭುಲಿಂಗ ಬಳಬಟ್ಟಿ ಗೆಲುವು ಸಾಧಿಸಿದರು.ಈ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ದತ್ತಾತ್ರೇಯ ‌ಪಾಟೀಲ ಪಾಟೀಲ ರೇವೂರ ಆಪ್ತ ಸೂರಜ್ ಪ್ರಸಾದ್ ತಿವಾರಿ ಸ್ಪರ್ಧಿಸಿದ್ದರು.

*ಕಲಬುರ್ಗಿಯ 33ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಗಮ್ಮ ಇನಾಮದಾರ ಗೆಲುವು ಸಾಧಿಸಿದರು.

*ಕಲಬುರ್ಗಿ: 6ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಅರುಣಾದೇವಿ ಅಂಬಾರಾಯ ಲಿಂಗನವಾಡಿ ಗೆಲುವು ಸಾಧಿಸಿದರು.

*ಕಲಬುರ್ಗಿ: ಒಂದನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಪುತಳಿ ಬೇಗಂ ಅಷ್ಫಾಕ್ ಮಿಯಾ ಗೆಲುವು ಸಾಧಿಸಿದರು

*ಕಲಬುರ್ಗಿ: 51ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪಾರ್ವತಿಬಾಯಿ ರಾಜು ದೇವದುರ್ಗ ಗೆಲುವು.

*ಕಲಬುರ್ಗಿ ಮಹಾನಗರ ಪಾಲಿಕೆ‌ ಚುನಾವಣೆಯಲ್ಲಿ ವಾರ್ಡ್ 36 ರಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಡಾ.ಶಂಭುಲಿಂಗ ಬಳಬಟ್ಟಿ ಗೆಲುವು ಸಾಧಿಸಿದ್ದಾರೆ.

*ಕಲಬುರ್ಗಿ: 15ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನಜ್ಮಾಬೇಗಂ ತಹರೇಲಿ ಗೆಲುವು

*ಕಲಬುರ್ಗಿ: 12ನೇ ವಾರ್ಡ್ ‌ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ ಗೆಲುವು

*ಖಾತೆ ತೆರೆದ ಜೆಡಿಎಸ್:ಕಲಬುರ್ಗಿಮಹಾನಗರ ‌ಪಾಲಿಕೆ ಚುನಾವಣೆಯಲ್ಲಿ 34ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ವಿಶಾಲ ನವರಂಗ್ ಗೆಲುವು ಸಾಧಿಸುವ ಮೂಲಕ ಪಕ್ಷದ ಖಾತೆ ತೆರೆದರು.

* 52ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಶೋಭಾ ದೇಸಾಯಿ ಗೆಲುವು

*45ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ತೃಪ್ತಿ ಲಾಖೆ ಗೆಲುವು

*21ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಶೇಖ್ ಅಜ್ಮಲ್ ಗೋಲಾ, 29ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಇಮ್ರಾನ್ ಮಹಮೂದ ಅಲಿ ಗೆಲುವು

20ಕ್ಕೆ ಏರಿದ ಬಿಜೆಪಿ ಅಭ್ಯರ್ಥಿಗಳ ಗೆಲುವು
32ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಮ್ಮ ಅವರುಗೆಲುವು ಸಾಧಿಸಿದ್ದಾರೆ. ಇದರೊಂದಿಗೆಮಹಾನಗರ ‌ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT